ಶನಿವಾರ, ಜನವರಿ 22, 2022
16 °C

ಕೊರೊನಾಗೆ ಓಮಿಕ್ರಾನ್‌ ರೂಪ: ದೇಶಗಳು ಈಗ ಏನು ಮಾಡಬೇಕು? ಡಬ್ಲ್ಯುಎಚ್‌ಒ ಸಲಹೆಗಳಿವು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿಗೆ (ಬಿ.1.1.529) ‘ಓಮಿಕ್ರಾನ್’ ಎಂಬ ಹೆಸರಿಡಲಾಗಿದ್ದು, ಆತಂಕಕಾರಿ ರೂಪಾಂತರ ಮಾದರಿ ಎಂದು ಗುರುತಿಸಲಾಗಿದೆ.

ಪ್ರಬಲವೂ, ಅತಿವೇಗವಾಗಿ ಪ್ರಸರಣೆ ಹೊಂದುವ ಗುಣವಿರುವ ಈ ರೂಪಾಂತರಿ ಮಾದರಿ ಹೊಮ್ಮಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತುರ್ತು ಸಭೆ ನಡೆಸಿತು.

ಈಗ ದೇಶಗಳು ಏನು ಮಾಡಬೇಕು ಎಂಬುದರ ಕುರಿತ ಸಲಹೆಗಳನ್ನು ಆರೋಗ್ಯ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

– ಸಾಂಕ್ರಾಮಿಕಗೊಳ್ಳುತ್ತಿರುವ ವೈರಸ್‌ನ ರೂಪಾಂತರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ತಪಾಸಣೆ ಮತ್ತು ಅನುಕ್ರಮ ಅಧ್ಯಯನಗಳನ್ನು ಹೆಚ್ಚಿಸಬೇಕು.

– ಜಿನೋಮ್ ಸೀಕ್ವೆನ್ಸ್ ಅಧ್ಯಯನದ ಮಾಹಿತಿ ಮತ್ತು ಅದಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ದೇಶಗಳು ಸಾರ್ವಜನಿಕಗೊಳಿಸಬೇಕು.

– ಆತಂಕಕ್ಕೆ ಕಾರಣವಾಗಿರುವ ವೈರಸ್‌ನ ಸೋಂಕಿಗೆ ಸಂಬಂಧಿಸಿದ ಆರಂಭಿಕ ಪ್ರಕರಣಗಳು ಮತ್ತು ಗುಂಪುಗಳನ್ನು ಅಂತರಾಷ್ಟ್ರೀಯ ಆರೋಗ್ಯ ನಿಯಮಗಳ ಕಾರ್ಯವಿಧಾನದ ಮೂಲಕ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಬೇಕು.

–ಕೋವಿಡ್‌ ಸಾಂಕ್ರಾಮಿಕ ರೋಗಶಾಸ್ತ್ರ, ರೋಗದ ತೀವ್ರತೆ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳ ಪರಿಣಾಮಕಾರಿತ್ವ, ರೋಗನಿರ್ಣಯ ವಿಧಾನಗಳು, ಪ್ರತಿರಕ್ಷಣಾ ಪ್ರತಿಕ್ರಿಯೆಗಳು, ಪ್ರತಿಕಾಯ ತಟಸ್ಥಗೊಳಿಸುವಿಕೆ ಅಥವಾ ಇತರ ಸಂಬಂಧಿತ ಗುಣಲಕ್ಷಣಗಳ ಮೇಲಿನ ವೈರಸ್‌ವೊಂದರ ಪರಿಣಾಮಗಳನ್ನು ತಿಳಿಯಲು ಕ್ಷೇತ್ರೀಯ ಅಧ್ಯಯನ, ಪ್ರಯೋಗಾಲಯಗಳಲ್ಲಿ ಮೌಲ್ಯಮಾಪನಗಳು ನಡೆಯಬೇಕು ನಡೆಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು