ಬುಧವಾರ, ಜನವರಿ 19, 2022
23 °C

ಅಲ್ದಾಳ: ಬೀದಿ ನಾಯಿಗಳ ದಾಳಿಗೆ 12 ಕುರಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ‌: ಬೀದಿ ನಾಯಿಗಳ ದಾಳಿಗೆ 12 ಕುರಿ ಮರಿಗಳು ಬಲಿಯಾದ ಘಟನೆ ತಾಲ್ಲೂಕಿನ ಆಲ್ದಾಳ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಕುರಿ ಮರಿಗಳು ದುರ್ಗಪ್ಪ ಬಂಡೆಪ್ಪ ಕೊಜ್ಜಾಪುರ ಅವರಿಗೆ ಸೇರಿವೆ.

ದುರ್ಗಪ್ಪ ಬಡ ರೈತರಿದ್ದು ಕುರಿ ಸಾಕಾಣೆ ಮಾಡುತ್ತಿದ್ದರು. ಊರ ಪಕ್ಕದಲ್ಲಿ ಅವರ ಜಮೀನಿದ್ದು, ಅಲ್ಲಿ 25 ಕುರಿ ಮರಿಗಳನ್ನು ಬಿಟ್ಟು ಸುತ್ತಲೂ ಬೇಲಿ ಹಾಕಿ ದೊಡ್ಡ ಕುರಿಗಳನ್ನು ಮೇಯಿಸಲು ಹೋಗಿದ್ದರು. ಏಕಾಏಕಿ 5-6 ಬೀದಿ ನಾಯಿಗಳು ದಾಳಿ ಮಾಡಿ ಕುರಿ ಮರಿಗಳನ್ನು ಕಚ್ಚಿ ಸಾಯಿಸಿವೆ. ಅಷ್ಟರಲ್ಲಿ ಆ ಮಾರ್ಗದಲ್ಲಿ ಹೋಗುತ್ತಿದ್ದ ರೈತರು ನಾಯಿಗಳನ್ನು ಓಡಿಸಿದ್ದಾರೆ. ಉಳಿದ 13 ಕುರಿ ಮರಿಗಳು ಪಾರಾಗಿವೆ.

ಸ್ಥಳಕ್ಕೆ ಗ್ರಾಮ ಲೆಕ್ಕಿಗ ಸಂತೋಷರೆಡ್ಡಿ ಮತ್ತ ಪೊಲೀಸರು ಭೇಟಿ ನೀಡಿದ್ದರು. ಕುರಿ ಮರಿಗಳ ಸಾವಿನಿಂದ ₹60 ಸಾವಿರ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು