ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬುಲೆನ್ಸ್ ದುರಸ್ತಿಗೆ ಮುಂದಾದ ಅಧಿಕಾರಿಗಳು

ಸಮುದಾಯ ಆರೋಗ್ಯ ಕೇಂದ್ರದ
Last Updated 6 ಜನವರಿ 2020, 10:40 IST
ಅಕ್ಷರ ಗಾತ್ರ

ಕೆಂಭಾವಿ:ಹಲವು ವರ್ಷಗಳಿಂದ ಕೋಮಾ ಸ್ಥಿತಿಗೆ ತಲುಪಿದ್ದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಅಂಬುಲೆನ್ಸ್ ಶುಕ್ರವಾರ ಇಲಾಖೆಯ ಮತ್ತೊಂದು (ನಗುಮಗು) ಅಂಬುಲೆನ್ಸ್ ಮೂಲಕ ಯಾದಗಿರಿ ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯಾಲಯಕ್ಕೆ ಕೊಂಡೊಯ್ಯಲಾಯಿತು.

ಸಮುದಾಯ ಆರೋಗ್ಯ ಕೇಂದ್ರವಾಗಿ ಹಲವು ವರ್ಷಗಳೇ ಗತಿಸಿದರೂ ಇಲ್ಲಿ ಕೆಲವು ದಿನಗಳು ಮಾತ್ರ ಹೊಸದಾಗಿ ಆಗಮಿಸಿದ ಅಂಬುಲೆನ್ಸ್ ಸೇವೆ ರೋಗಿಗಳ ಸೇವೆಗೆ ಸಿದ್ಧವಾಗಿತ್ತು. ಆದರೆ ದುರದೃಷ್ಟವಶಾತ್ ಅದರ ಚಾಲಕ ಬಸವರಾಜ ಕಕ್ಕೇರಾ ಎಂಬುವರು ಕಳೆದ ಮೂರು ವರ್ಷಗಳ ಹಿಂದೆ ನಿಧನ ನಂತರ ಈ ವಾಹನ ಕೆಟ್ಟು ನಿಂತಿವೆ.

ಈ ಕುರಿತು ಪತ್ರಿಕೆ ಹಲವು ಬಾರಿ ವರದಿ ಮಾಡಿತ್ತು. 3 ವರ್ಷಗಳ ನಂತರ ಎಚ್ಚೆತ್ತುಕೊಂಡಿರುವ ಜಿಲ್ಲಾಮಟ್ಟದ ಅಧಿಕಾರಿಗಳು ಶುಕ್ರವಾರ ಸಂಪೂರ್ಣ ಕೆಟ್ಟು ನಿಂತಿರುವ ಅಂಬುಲೆನ್ಸ್ ಎಳೆದು ತರುವಂತೆ ಸರ್ಕಾರದ ಮತ್ತೊಂದು ಅಂಬುಲೆನ್ಸ್ ನಗುಮಗುವಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಟೋಚನ್ ಮೂಲಕ ಜಿಲ್ಲಾ ಕೇಂದ್ರಕ್ಕೆ ಕಳಿಸಿ ಕೊಡಲಾಗಿದೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT