ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾನಾಪುರದಲ್ಲಿ ಎಟಿಎಂ ಬಂದ್‌: ಗ್ರಾಹಕರ ಪರದಾಟ

Published : 26 ಆಗಸ್ಟ್ 2024, 15:57 IST
Last Updated : 26 ಆಗಸ್ಟ್ 2024, 15:57 IST
ಫಾಲೋ ಮಾಡಿ
Comments

ಯಾದಗಿರಿ: ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಸಮೀಪದ ಖಾನಾಪುರ ಕ್ರಾಸ್ ಬಳಿಯ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಯಂತ್ರ ಕಳೆದ ಒಂದು ವಾರದಿಂದ ಕೆಟ್ಟಿದ್ದು, ಬ್ಯಾಂಕಿನ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು, ವ್ಯಾಪಾರಸ್ಥರು, ಗ್ರಾಹಕರು, ರೈತರಿಗೆ, ಹೆದ್ದಾರಿಯ ಮೇಲೆ ಸಂಚರಿಸುವ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ.

ಈ ಭಾಗದಲ್ಲಿ ಏಕೈಕ ಎಟಿಎಂ ಯಂತ್ರ ಇರುವುದರಿಂದ ನೂರಾರು ಜನರು ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲದಿದ್ದರೆ ಶಹಾಪುರಕ್ಕೆ ಅಥವಾ ಯಾದಗಿರಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಒಂದು ವಾರದಿಂದ ಕೆಟ್ಟಿರುವ ಎಟಿಎಂ ಯಂತ್ರ ದುರಸ್ತಿಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಬ್ಯಾಂಕ್‌ನ ಅಧಿಕಾರಿಗಳ ಮೇಲೆ ಗ್ರಾಹಕರು, ರೈತರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಗ್ರಾಹಕರ ಪರವಾಗಿ ಆರ್‌ಬಿಐಗೆ ದೂರು ನೀಡಲಾಗಿದೆ ಎಂದು ಗ್ರಾಹಕ ಚಂದಪ್ಪ ಗುರುಸುಣಿಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT