ಯಾದಗಿರಿ: ‘ಬ್ಯಾಂಕ್ ಶಾಖೆಗಳು ಹಾಗೂ ಎಟಿಎಂ ಕೇಂದ್ರಗಳ ಭದ್ರತೆಗೆ ಬ್ಯಾಂಕ್ ಸಿಬ್ಬಂದಿ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತಾ ಉಪಕರಣಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಅದರ ವರದಿಯನ್ನೂ ಸಲ್ಲಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಬ್ಯಾಂಕ್ ಮ್ಯಾನೇಜರ್ಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಬ್ಯಾಂಕ್, ಎಟಿಎಂ ಭದ್ರತೆ, ಸುರಕ್ಷತಾ ಕ್ರಮಗಳು ಹಾಗೂ ಜಾಗೃತಿ ಕುರಿತು ಜಿಲ್ಲೆಯ ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

‘ಸುರಕ್ಷತೆಯ ದೃಷ್ಟಿಯಿಂದ ಎಟಿಎಂ ಕೇಂದ್ರಗಳಲ್ಲಿ ಹಾಗೂ ಬ್ಯಾಂಕ್ ಶಾಖೆಗಳಲ್ಲಿ ಅಲಾರಾಂಗಳನ್ನು ಅಳವಡಿಸಬೇಕು. ಉತ್ತಮ ದರ್ಜೆಯ ಹಾಗೂ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಜೋಡಣೆ ಮಾಡಿ, ರಸ್ತೆಯೂ ಕಾಣುವಂತೆ ಅಳವಡಿಸಬೇಕು. ಆರ್ಬಿಐ ನಿಯಾಮವಳಿಗೆ ಅನುಗುಣವಾಗಿ ಸುರಕ್ಷತೆಯ ಎಸ್ಒಪಿ (ಸಮಗ್ರ ಪ್ರಮಾಣೀಕೃತ ಕಾರ್ಯವಿಧಾನ) ಪಾಲನೆಯೂ ಮಾಡಬೇಕು’ ಎಂದರು.

‘ಕೀಗಳಿಗೆ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆ ಮಾಡಿರಬೇಕು. ಅಗ್ನಿ ಅವಘಡದ ಅಲಾರಾಂ ಸದಾ ಕಾರ್ಯನಿರ್ವಹಿಸುವಂತೆ ಇಟ್ಟುಕೊಳ್ಳಬೇಕು. ರಾತ್ರಿ ವೇಳೆಯಲ್ಲಿಯೂ ಅದು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪ್ರತಿಯೊಂದು ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳಲ್ಲಿ ಬ್ಯಾಂಕ್ನ ಆಟೊ ಡಯಲ್ ನಂಬರ್ ಜೊತೆಗೆ ಪೊಲೀಸ್ ಸಹಾಯವಾಣಿ ನಂಬರ್ ಸಹ ಹಾಕಿರಬೇಕು. ಏನಾದರು ಅನಾಹುತ ನಡೆದು ಫೋನ್ ಕರೆ ಬಂದ ತಕ್ಷಣವೇ ಬೀಟ್ನಲ್ಲಿರುವ ಪೊಲೀಸರ ಘಟನಾ ಸ್ಥಳಕ್ಕೆ ತೆರಳಲು ಸಹಾಯ ಆಗುತ್ತದೆ. ಬ್ಯಾಂಕ್ನಲ್ಲಿ ಯಾರಾದರೂ ಅನುಮಾನಾಸ್ಪದವಾಗಿ ವರ್ತಿಸುವುದು, ಓಡಾಡುವುದು ಕಂಡುಬಂದಲ್ಲಿ ತಕ್ಷಣವೇ 112ಗೆ ಮಾಹಿತಿ ನೀಡಬೇಕು’ ಎಂದರು.

‘ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸುವಾಗ ಎಚ್ಚರಿಕೆ ವಹಿಸಬೇಕು. ಸರಿಯಾಗಿ ಎಸ್ಒಪಿಗಳನ್ನು ಅನುಸರಿಸಬೇಕು. ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳನ್ನು ರಾತ್ರಿವರೆಗೆ ಮಾತ್ರವೇ ತೆರೆದಿಡಬೇಕು. ಬಳಿಕ ಅವುಗಳನ್ನು ಮುಚ್ಚಿಸಬೇಕು. ಸಾರ್ವಜನಿಕರ ಹಣದ ಸುರಕ್ಷತೆ ಮಾಡುವುದು ಬ್ಯಾಂಕ್ ಹಾಗೂ ಸಿಬ್ಬಂದಿಯ ಕರ್ತವ್ಯ’ ಎಂದು ಹೇಳಿದರು.

15 ದಿನ ಗಡುವು: ‘ಸುರಕ್ಷತಾ ಸಾಧನಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಅವುಗಳ ವರದಿಯನ್ನು 15 ದಿನಗಳ ಒಳಗಾಗಿ ಸಲ್ಲಿಕೆ ಮಾಡಬೇಕು’ ಎಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಎಸ್ಪಿ ಸೂಚಿಸಿದರು.

ಸಭೆಯಲ್ಲಿ ಎಸ್ಬಿಐ, ಕೆಜಿಬಿ ಬ್ಯಾಂಕ್ನ ಮುಖ್ಯ ಅಧಿಕಾರಿಗಳು, ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.

ಎಟಿಎಂ, ಬ್ಯಾಂಕ್ಗಳಲ್ಲಿ ಪೊಲೀಸ್ ಸಹಾಯವಾಣಿ ನಂಬರ್ | ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳ ಜೋಡಣೆಗೆ ಸಲಹೆ | ಯಾದಗಿರಿ ನಗರದಲ್ಲಿ 44 ಎಟಿಎಂ ಕೇಂದ್ರಗಳು

ಅಣಕು ಪ್ರದರ್ಶನಕ್ಕೆ ಸೂಚನೆ

‘ಪ್ರತಿಯೊಂದು ಬ್ಯಾಂಕ್ ಶಾಖೆಯಲ್ಲಿ ತುರ್ತು ಸಂದರ್ಭದ ನಿರ್ವಹಣೆಗಾಗಿ ಅಲಾರಾಂ ವ್ಯವಸ್ಥೆಯ ಅಣುಕ ಪ್ರದರ್ಶನವನ್ನು ಪೊಲೀಸರ ಸಮ್ಮುಖದಲ್ಲಿ ಮಾಡಿ ಅವುಗಳ ಕಾರ್ಯವೈಖರಿಯನ್ನು ಖಚಿತಪಡಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಾಕೀತು ಮಾಡಿದರು. ‘ಗ್ಯಾಸ್ ಕಟ್ಟರ್ ಬಳಸುವಾಗ ಗ್ಯಾಸ್ನ ಶಾಖದಿಂದಲೂ ಅಲಾರಾಂ ಸೌಂಡ್ ಬರುವಂತೆ ಅಳವಡಿಕೆ ಮಾಡಬೇಕು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಎಟಿಎಂಗಳಿಗೆ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಅಣಕು ಪ್ರದರ್ಶನ ವರದಿ ಸಲ್ಲಿಕೆ ಕಡ್ಡಾಯ’

‘ಜನವರಿ ತಿಂಗಳಲ್ಲಿ ಸಭೆ ನಡೆಸಿ ಇದೇ ವಿಷಯಗಳನ್ನು ಚರ್ಚಿಸಲಾಗಿತ್ತು. ಆದರೆ ಯಾವುದೇ ಮ್ಯಾನೇಜರ್ಗಳು ಅವುಗಳ ಪಾಲನೆ ಮಾಡಲಿಲ್ಲ. ಏನಾದರು ಅಹಿತಕರ ಘಟನೆಗಳು ನಡೆದರೆ ಬ್ಯಾಂಕ್ ಮ್ಯಾನೇಜರ್ಗಳ ಮೇಲೆ ಪ್ರಕರಣ ದಾಖಲಿಸುವುದಾಗಿ ಎಸ್ಪಿ ಅವರು ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ’ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಾಂಚಾಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಅಣಕು ಪ್ರದರ್ಶನ ವರದಿ ಸಲ್ಲಿಕೆ ಮಾಡುವುದು ಮ್ಯಾನೇಜರ್ಗಳ ಜವಾಬ್ದಾರಿ ಮತ್ತು ಕಡ್ಡಾಯವಾಗಿದೆ ಎಂದು ನಿರ್ದೇಶನ ನೀಡಲಾಗಿದೆ. ಇಲ್ಲದಿದ್ದರೆ ಕ್ರಮವನ್ನು ಎದುರಿಸಬೇಕಾಗುತ್ತದೆ’ ಎಂದರು.

124 ಬ್ರಾಂಚ್ 107 ಎಟಿಎಂ

ಇಡೀ ಜಿಲ್ಲೆಯಲ್ಲಿ 124 ಬ್ಯಾಂಕ್ ಶಾಖೆಗಳು ಹಾಗೂ 107 ಎಟಿಎಂ ಕೇಂದ್ರಗಳಿವೆ. ಯಾದಗಿರಿ ನಗರದಲ್ಲಿ 44 ಗುರುಮಠಕಲ್ನಲ್ಲಿ 6 ಹುಣಸಗಿಯಲ್ಲಿ 2 ಶಹಾಪುರದಲ್ಲಿ 31 ಸುರಪುರದಲ್ಲಿ 23 ಹಾಗೂ ವಡಗೇರಾದಲ್ಲಿ 1 ಎಟಿಎಂ ಕೇಂದ್ರ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.