ತಾಲ್ಲೂಕಿನ ಕೋನ್ಹಾಳ ಗ್ರಾಮದ ಬಸನಗೌಡ ಊಟಿ ಎಂಬುವವರು ಕೆನರಾ ಬ್ಯಾಂಕಿನಿಂದ ₹ 3 ಲಕ್ಷ ಹಣ ಡ್ರಾ ಮಾಡಿಕೊಂಡು ಅಂಗಡಿಯೊಂದರಲ್ಲಿ ಫ್ಯಾನ್ ಖರೀದಿಸಲು ಕಾರ್ ನಿಲ್ಲಿಸಿ ಹೋಗಿದ್ದಾರೆ. ಇದನ್ನು ನೋಡಿರುವ ಕಳ್ಳ ಹಣ ದೋಚಿದ್ದಾನೆ. ₹ 2 ಲಕ್ಷ ಕಾರಿನ ಇನ್ನೊಂದು ಬದಿ ಇಟ್ಟಿದ್ದರಿಂದ ಉಳಿದುಕೊಂಡಿವೆ. ಕಳ್ಳ ಕೆನರಾ ಬ್ಯಾಂಕಿನಿಂದಲೇ ಹಿಂಬಾಲಿಸಿರಬಹುದು ಎಂದು ಅಂದಾಜಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.