ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ಅಗ್ನಿ ದುರಂತಕ್ಕೆ ದಂಪತಿ ಸಜೀವ ದಹನ

Last Updated 27 ಮಾರ್ಚ್ 2023, 5:29 IST
ಅಕ್ಷರ ಗಾತ್ರ

ಸೈದಾಪುರ (ಯಾದಗಿರಿ): ಪಟ್ಟಣದ ಮನೆಯೊಂದರಲ್ಲಿ ಸೋಮವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ದಂಪತಿ ಸಜೀವ ದಹನವಾಗಿದ್ದಾರೆ.‌ ಕೆ.ಬಿ.ರಾಘವೇಂದ್ರ (39), ಶಿಲ್ಪಾ ರಾಘವೇಂದ್ರ (32) ಮೃತಪಟ್ಟವರು.

ಬಟ್ಟೆ ಅಂಗಡಿ ವ್ಯಾಪಾರಿಗಳಾಗಿದ್ದ ಇವರು ಮನೆಯ ಮೂರು ಮಹಡಿಗಳ ಪೈಕಿ ಎರಡರಲ್ಲಿ ಬಟ್ಟೆ ವ್ಯಾಪಾರ, ಒಂದರಲ್ಲಿ ವಾಸವಿದ್ದರು.

ಎಂದಿನಂತೆ ವ್ಯವಹಾರ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದಾಗ ಭಾನುವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಸೋಮವಾರ ಬೆಳಗಿನ ಜಾವ 5 ಗಂಟೆಗೆ ಸಾರ್ವಜನಿಕರು ಗಮನಿಸಿದ್ದಾರೆ‌.

ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಬಟ್ಟೆಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT