ಯಾದಗಿರಿ: ದಕ್ಷಿಣ ಮಧ್ಯ ರೈಲ್ವೆಯ ಯಾದಗಿರಿ ರೈಲು ನಿಲ್ದಾಣ ಸಲಹಾ ಸಮಿತಿಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿರುವ ಬಿಜೆಪಿ ಮುಖಂಡ ಹಣಮಂತ ಮಡ್ಡಿಯವರಿಗೆ ಸ್ಟೇಷನ್ ಬಡಾವಣೆಯ ಶಿವನಗರದಲ್ಲಿ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.

ಗೆಳೆಯರ ಬಳಗದ ಸಂಚಾಲಕ ನಾಮದೇವ ವಾಟ್ಕರ್ ಮಾತನಾಡಿ, ‘ಗುಂತಕಲ್ ವಿಭಾಗದಲ್ಲಿಯೇ ಯಾದಗಿರಿ ರೈಲ್ವೆ ನಿಲ್ದಾಣದಿಂದ ರೈಲ್ವೆಗೆ ಹೆಚ್ಚಿನ ಆದಾಯವಿದೆ. ಆದರೆ, ಕೆಲವೊಂದು ಎಕ್ಸ್‌ಪ್ರೆಸ್ ರೈಲುಗಳು ಇಲ್ಲಿ ನಿಲ್ಲುವುದಿಲ್ಲ. ಇಂಟರ್ ಸಿಟಿ ರೈಲು ಸ್ಥಗಿತಗೊಂಡಿರುವುದರಿಂದ ಈ ಭಾಗದ ರೈತರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

‘ಶೀಘ್ರವೇ ಇಂಟರ್‌ಸಿಟಿ ರೈಲು ಆರಂಭಿಸಲು ಪ್ರಯತ್ನಿಸಬೇಕು. ರೈಲು ನಿಲ್ದಾಣದಲ್ಲಿ ಕೆಲವೊಂದು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅದನ್ನು ಗಂಭೀರವಾಗಿ ಪರಿಗಣಿಸಿ ಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸಬೇಕು’ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಮಡ್ಡಿ, ‘ನನ್ನ ಅವಧಿಯಲ್ಲಿ ಯಾದಗಿರಿ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಎಕ್ಸ್‌ಪ್ರೆಸ್ ರೈಲುಗಳನ್ನು ನಿಲುಗಡೆಗೆ ಹಾಗೂ ಇಂಟರ್‌ಸಿಟಿ ರೈಲು ಆರಂಭಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಶಿವರುದ್ರಪ್ಪ ಸಾವಂತ, ಚಂದ್ರಕಾಂತ ಮಡ್ಡಿ, ಶ್ರೀನಿವಾಸ ಗುಡಗುಡಿ, ಶ್ರೀಶೈಲ್, ಸಾಬಣ್ಣ ಬಾಡಿಯಾಳ, ನಾಗರಾಜ ಮಡ್ಡಿ ತುಮಕೂರು, ಕೃಷ್ಣ ಮಡ್ಡಿ, ಮಂಜುನಾಥ, ಮರೆಪ್ಪ ಮಡ್ಡಿ, ಮಲ್ಲಿಕಾರ್ಜುನ, ಲಕ್ಷ್ಮಣ, ಶರಣು ಜಿ, ಶರಣು ಎಸ್, ಗೋಪಿ, ವಿಶ್ವನಾಥ, ಶಂಕರ, ರವಿ, ವಿಶ್ವನಾಥ, ಹನಿಫ್ ಮುಲ್ಲಾ, ನಾಗು, ಭೀಮು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.