ಹುಣಸಗಿ: ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಓಣಿಯಲ್ಲಿ ಕಳೆದ ಎರಡು ವರ್ಷಗಳಿಂದ ಹಿಂದೂ–ಮುಸ್ಲಿಂ ಯುವಕರು ‘ವಿನಾಯಕ ಹಿಂದೂ–ಮುಸ್ಲಿಂ ಗೆಳೆಯರ ಬಳಗ’ ಕಟ್ಟಿಕೊಂಡು ಗಣೇಶ ಉತ್ಸವವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತ ಇತರರಿಗೆ ಮಾದರಿಯಾಗಿದ್ದಾರೆ.

ಈ ಯುವಕರಿಗೆ ಆ ವಾರ್ಡ್ ಹಾಗೂ ಓಣಿಯ ಹಿರಿಯರ ಪ್ರೋತ್ಸಾಹ, ನಮಗೆ ಹುಮ್ಮಸ್ಸು ತಂದಿದ್ದರಿಂದಾಗಿ ಈ ಕಾರ್ಯಕ್ರಮ ಆಯೋಜಿಸುತ್ತಿರುವದಾಗಿ ಈ ಗೆಳೆಯರ ಬಳಗದ ಯುವಕ ಸದ್ದಾಂ ಟೋಣ್ಣೂರ್ ಸಂತಸ ವ್ಯಕ್ತಪಡಿಸಿದರು.

ಗಣೇಶ ಚೌತಿಯ ದಿನದಂದು ಎಲ್ಲರೂ ಕೂಡಿಕೊಂಡು ಅಲಂಕೃತ ವಾಹನದಲ್ಲಿ ಗಣಪತಿಯನ್ನು ಮೆರವಣಿಗೆಯಲಿ ತಂದು ಎಲ್ಲ ಪೂಜಾ ವಿಧಿಗಳೊಂದಿಗೆ ಪ್ರತಿಷ್ಠಾಪಿಸಿ ಭಕ್ತಿಭಾವದೊಂದಿಗೆ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಕಾಶೀಂಸಾಬ್ ಟೊಣ್ಣೂರ್, ನಿಂಗು, ಮುತ್ತು, ಅಯ್ಯಪ್ಪ, ಬಂದೇನವಾಜ, ಇಸ್ಮಾಯಿಲ್, ದೇವು, ಸಾಗರ, ಸಿದ್ದು, ವೆಂಕಟೇಶ, ಲಾಲಸಾಬ್ ನದಾಫ್, ಅಭಿ, ದೇವರಾಜ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.