ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಈ ಬಾರಿ ಘಾಟು ಕಳೆದುಕೊಂಡಿದ್ದು, ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.

ಜಿಲ್ಲೆಯಲ್ಲಿ 2,812 ಹೆಕ್ಟೇರ್ನಲ್ಲಿ ಮೆಣಸಿಕಾಯಿ ಬೆಳೆ ಇದೆ. ಶಹಾಪುರ ತಾಲ್ಲೂಕಿನಲ್ಲಿ ಅಂದಾಜು 2,000 ಹೆಕ್ಟೇರ್, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ 800 ಹೆಕ್ಟೇರ್ ಮೆಣಸಿನಕಾಯಿ ಬೆಳೆ ಇದೆ. 2,241 ಕ್ವಿಂಟಲ್ ಅಂದಾಜು ಉತ್ಪಾದನೆ ಇದೆ.

ಗುಂಟೂರು ಖಾರದ ಮೆಣಸಿನಕಾಯಿ ಹಾಗೂ ಬ್ಯಾಡಗಿ ಮೆಣಸಿನಕಾಯಿ ಬೆಳೆಗಾರರು ಪ್ರತಿವರ್ಷ ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದರು. ಈ ವರ್ಷ ಬೆಳೆ ಇಳಿಕೆಯಿಂದ ಜಂಘಾಬಲವೇ ಉಡುಗಿ ಹೋಗಿದೆ.

ಪಕ್ಕದ ರಾಜ್ಯಕ್ಕೆ ಮಾರಾಟ

ಜಿಲ್ಲೆಯಲ್ಲಿ ಬೆಳೆಯುವ ಬ್ಯಾಡಗಿ, ಗುಂಟೂರು ಮೆಣಸಿನಕಾಯಿಯನ್ನು ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ಬೆಲೆ ಇಲ್ಲದ ಕಾರಣ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಶಹಾಪುರ ತಾಲ್ಲೂಕಿನ ಮೂಡಬೂಳ ಗ್ರಾಮದ ಬೆಳೆಗಾರರು ಕಳೆದ ಕೆಲವು ದಿನಗಳಿಂದ ಸೊಲ್ಲಾಪುರ ಮಾರುಕಟ್ಟೆಗೆ ಬೆಳೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಪ್ರತಿ ಕ್ವಿಂಟಲ್ಗೆ ₹12 ಸಾವಿರ ಇದ್ದ ಬೆಲೆ ₹8ಸಾವಿರಕ್ಕೆ ಇಳಿಕೆಯಾಗಿದೆ. ದರ ಬರುವ ವರೆಗೆ ದಾಸ್ತಾನು ಇಡಲು ಸೂಕ್ತ ಶೀಥಲೀಕರಣ ವ್ಯವಸ್ಥೆ ಇಲ್ಲ. ಎಕರೆಗೆ ಕನಿಷ್ಠ ₹1.25 ಲಕ್ಷ ಖರ್ಚು ಮಾಡಿದ ಬೆಳೆಗಾರರ ಗೋಳು ಕೇಳುವವರು ಇಲ್ಲದಂತಾಗಿದೆ ಎನ್ನುತ್ತಾರೆ ಬೆಳೆಗಾರರು.

‘ಶಹಾಪುರ ತಾಲ್ಲೂಕಿನ ರೈತರು ಸೊಲ್ಲಾಪುರ ಕಡೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಂಗ್ರಹಣೆ ಮಾಡಿಕೊಳ್ಳಲು ಶೀಥಲೀಕರಣ ಇಲ್ಲದಿರುವುದು ಕೂಡ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎನ್ನುತ್ತಾರೆ ಪ್ರಗತಿಪರ ರೈತ ಅಶೋಕ ಮಲ್ಲಾಬಾದಿ.

ಗುಂಟೂರು ಖಾರದ ಮೆಣಸಿನಕಾಯಿ ಬೆಳೆಗೆ ಕ್ಟಿಂಟಲ್ಗೆ ಉತ್ಪಾದನಾ ವೆಚ್ಚವನ್ನು ₹12,675 ದರ ನಿಗದಿ ಪಡಿಸಿದೆ. ಆದರೆ, ಸರ್ಕಾರವಾಗಲಿ, ವ್ಯಾಪಾರಿಗಳಾಗಲಿ ದರದಲ್ಲಿ ಯಾರೂ ಈ ದರಕ್ಕೆ ಖರೀದಿಸುತ್ತಿಲ್ಲ. ಪಕ್ಕದ ರಾಜ್ಯ ಆಂಧ್ರ ಪ್ರದೇಶದಲ್ಲಿ ರೈತರು ಬೆಳೆದ ಮೆಣಸಿನ ಕಾಯಿಬೆಳೆಗೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುತ್ತಿದೆ. ಉತ್ಪಾದನೆಯ ಶೇ 25ರಷ್ಟು ಕೆಂಪು ಮೆಣಸಿನಕಾಯಿ ಕ್ಟಿಂಟಲ್ಗೆ ₹11,781 ಕನಿಷ್ಠ ದರ ನಿಗದಿ ಪಡಿಸಿದೆ. ಈ ಸೌಲಭ್ಯವನ್ನು ಕರ್ನಾಟಕ ವಿಸ್ತರಿಸಬೇಕು ಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.

ಬಾಡಗಿ ಕ್ವಿಂಟಲ್ಗೆ ₹14–22 ಸಾವಿರ ಬ್ಯಾಡಗಿ ಡಬ್ಬಿ ₹30–36 ಸಾವಿರ ಬ್ಯಾಡಗಿ ಕಡ್ಡಿ ₹10 ರಿಂದ 30 ಸಾವಿರ ಗುಂಟೂರು ₹10 ರಿಂದ 17 ಸಾವಿರ ಇತರೆ ₹8 ಸಾವಿರ ಬೆಲೆ ಇದೆ. ಅಂದಾಜು 700 ಬೆಳೆಗಾರರಿದ್ದಾರೆ

–ರಾಘವೇಂದ್ರ ಉಕ್ಕನಾಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಮೆಣಸಿನಕಾಯಿ ಕ್ವಿಂಟಲ್ಗೆ ₹8 ರಿಂದ 9ಸಾವಿರಗೆ ಮಾರಾಟವಾಗುತ್ತಿದ್ದು ರೈತರಿಗೆ ₹3–4 ಲಕ್ಷ ನಷ್ಟವಾಗುತ್ತಿದೆ. ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ತರಬೇಡಿ ಎಂದು ಹೇಳುತ್ತಿದ್ದಾರೆ

–ಅಶೋಕ ಮಲ್ಲಾಬಾದಿ ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.