ಯಾದಗಿರಿ: ಗ್ರಾಮ ಪಂಚಾಯಿತಿ ಕ್ರಿಯಾ ಯೋಜನೆಯ ಮಾಹಿತಿ ಕೇಳಿದ್ದಕ್ಕೆ ವ್ಯಕ್ತಿಗೆ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ್ದ ದೂರಿನಡಿ ಜಿಲ್ಲೆಯ ಹಗರಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ಸೇರಿ 10 ಮಂದಿ ವಿರುದ್ಧ ನಾರಾಯಣಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಧ್ಯಕ್ಷ ರಾಯನಗೌಡ ಮಾಲಿ ಪಾಟೀಲ, ಪಿಡಿಒ ಬಸನಗೌಡ ಮುರಾಳ ಸೇರಿ 10 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ನೀಡಿದ್ದ ಅರುಣಕುಮಾರ್ ಅವರು 2024–25ನೇ ಸಾಲಿನ ಹಣಕಾಸು, ಕರವಸೂಲಿ ಹಾಗೂ ಕ್ರಿಯಾಯೋಜನೆ ಕುರಿತ ಮಾಹಿತಿಗೆ ಅರ್ಜಿ ಸಲ್ಲಿಸಿದ್ದರು. ‘ಕ್ರಿಯಾಯೋಜನೆ ಕೇಳುವಷ್ಟು ಸೊಕ್ಕಾ’ ಎಂದು ನಿಂದಿಸಿ, ಕೊಡಲಿ, ಕಬ್ಬಿಣದ ರಾಡ್, ಸಲಿಕೆಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.