ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಬೆಳ್ಳುಳ್ಳಿ, ಹಸಿ ಶುಂಠಿ ದರ ಮತ್ತೆ ಏರಿಕೆ

ಸೊಪ್ಪುಗಳ ದರ ಯಥಾಸ್ಥಿತಿ, ನಿಂಬೆ ಹಣ್ಣು ದರ ಹೆಚ್ಚಳ
Published 18 ಫೆಬ್ರುವರಿ 2024, 4:31 IST
Last Updated 18 ಫೆಬ್ರುವರಿ 2024, 4:31 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ಎರಡು ವಾರಕ್ಕೆ ಹೋಲಿಸಿದರೆ ಈ ಬಾರಿ ಕೆಲ ತರಕಾರಿಯಲ್ಲಿ ಏರಿಕೆ, ಇಳಿಕೆ ಕಂಡು ಬಂದಿದೆ.

ಹಸಿ ಮೆಣಸಿನಕಾಯಿ, ಹಾಗಲಕಾಯಿ, ಅವರೆಕಾಯಿ, ತೊಂಡೆಕಾಯಿ, ಬದನೆಕಾಯಿ ಕಳೆದ ಬಾರಿಗಿಂತ ಈ ಬಾರಿ ₹5ರಿಂದ 10 ದರ ಏರಿಕೆಯಾಗಿದೆ.

ನುಗ್ಗೆಕಾಯಿ, ಈರುಳ್ಳಿ, ಈರುಳ್ಳಿ, ಚವಳೆಕಾಯಿ, ಸೌತೆಕಾಯಿ, ಸೋರೆಕಾಯಿ, ಸೋರೆಕಾಯಿ, ತುಪ್ಪದ, ಗೀಚು ಹೀರೇಕಾಯಿ ₹5ರಿಂದ 10 ದರ ಇಳಿಕೆಯಾಗಿದೆ.

ಹಸಿ ಶುಂಠಿ ಒಂದು ಕೆಜಿಗೆ ₹160ರಿಂದ 180, ಬೆಳ್ಳುಳ್ಳಿ ₹400ರಿಂದ 420 ಏರಿಕೆಯಾಗಿದ್ದು, ಅತಿ ಹೆಚ್ಚು ದರ ಇರುವ ತರಕಾರಿ ಇದಾಗಿದೆ.

ಬೆಂಡೆಕಾಯಿ, ಆಲೂಗಡ್ಡೆ, ಎಲೆಕೋಸು, ಹೂಕೋಸು, ಗಜ್ಜರಿ, ಮೂಲಂಗಿ, ಬಿಟ್‌ರೂಟ್, ಮೂಲಂಗಿ, ಬಿಟ್‌ರೂಟ್ ಕಳೆದ ಮೂರು ವಾರಗಳಿಂದ ಒಂದೇ ದರವಿದೆ.

ಸಗಟು ದರದಲ್ಲಿ ಸಣ್ಣ ಗಾತ್ರದ ನಿಂಬೆಹಣ್ಣು ₹10ಗೆ ಎರಡು, ಚಿಲ್ಲರೆ ದರದಲ್ಲಿ ₹20ಗೆ ಮೂರು ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ ಸೊಪ್ಪು ಒಂದು ₹60, ಕರಿಬೇವು ಕೆಜಿಗೆ ₹50 ದರವಿದೆ.

ಸೊಪ್ಪುಗಳ ದರ

ಬೇಸಿಗೆ ಆರಂಭವಾಗಿದ್ದರೂ ಇನ್ನೂ ಸೊಪ್ಪುಗಳ ದರದಲ್ಲಿ ವ್ಯಾತ್ಯಾಸ ಕಂಡುಬಂದಿಲ್ಲ. ಮೆಂತ್ಯೆ, ಸಬ್ಬಸಗಿ ಸೊಪ್ಪು ದೊಡ್ಡ ಕಟ್ಟು ₹10ಗೆ ಒಂದು ₹20 ಗೆ ಮೂರು ಕಟ್ಟು, ಪಾಲಕ್‌, ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು, ಪುದೀನಾ, ಕೋತಂಬರಿ ₹15ಗೆ ಒಂದು ಕಟ್ಟು ಮಾರಾಟ ಮಾಡಲಾಗುತ್ತಿದೆ. 

ತರಕಾರಿ ಬೆಲೆಯಲ್ಲಿ ಏರಿಳಿಕೆಯಾಗಿದ್ದು ಗ್ರಾಹಕರಿಗೆ ಅಷ್ಟೇನು ಭಾರವಾಗಿಲ್ಲ. ಇದರಿಂದ ಕೆಲ ತರಕಾರಿ ಹೊರತುಪಡಿಸಿ ಎಲ್ಲ ತರಕಾರಿ ಕೈಗೆಟುವ ದರದಲ್ಲಿವೆ.
ಚಂದ್ರಕಾಂತ ಬಾಚವಾರ, ತಾಂಡಾ ಗ್ರಾಹಕ
ಕೆಲ ವಾರಗಳಿಂದ ತರಕಾರಿ ಸೊಪ್ಪು ದರದಲ್ಲಿ ಹೆಚ್ಚಿನ ವ್ಯಾತ್ಯಾಸವಾಗಿಲ್ಲ. ಮಾರುಕಟ್ಟೆಗೆ ತರಕಾರಿ ಆವಕ ಕೊರತೆ ಇಲ್ಲ.
ಜಾಕೀರ್‌ ಹುಸೇನ್, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT