ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | ತಂಪೆರೆದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

Published 15 ಮೇ 2024, 14:36 IST
Last Updated 15 ಮೇ 2024, 14:36 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಹದಭರಿತ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬರ ಹಾಗೂ ಕಡು ಬಿಸಿಲಿನಿಂದ ಕಂಗೆಟ್ಟ ಜನತೆಗೆ ಹಾಗೂ ರೈತಾಪಿ ವರ್ಗದಲ್ಲಿ ವರ್ಷಧಾರೆಯಿಂದ ಮತ್ತೆ ಭರವಸೆಯ ಬೆಳಕು ಮೂಡಿದೆ.

‘ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ರೈತರು ಜಮೀನು ಸ್ವಚ್ಛ ಮಾಡಿಕೊಂಡಿದ್ದರು. ಉತ್ತಮವಾಗಿ ಸುರಿದ ಮಳೆಯಿಂದ ಜಮೀನಿನಲ್ಲಿ ನೀರು ಹಿಂಗಿಕೊಂಡಿದೆ. ಇನ್ನೆರಡು ದಿನ ಬಿಟ್ಟು ಮತ್ತೆ ರಂಟೆ ಹಾಗೂ ನೇಗಿಲು ಹೊಡೆಯುತ್ತೇವೆ. ಸಕಾಲಕ್ಕೆ ಮಳೆ ಬಂದಿದೆ. ಇನ್ನೊಂದು ಉತ್ತಮ ಮಳೆಯಾದರೆ ಸಾಕು ಹೆಸರು ಬಿತ್ತನೆಗೆ ಸಜ್ಜಾಗುತ್ತೇವೆ’ ಎನ್ನುತ್ತಾರೆ ರೈತ ಅಂಬ್ಲಪ್ಪ.

‘ಮಳೆ ಮಾಪನ ವರದಿಯಂತೆ ಶಹಾಪುರ 48.4 ಮಿ.ಮೀ, ಭೀಮರಾಯನಗುಡಿ 45 ಮಿ.ಮೀ, ಹತ್ತಿಗುಡೂರ 25 ಮಿ.ಮೀ, ದೋರನಹಳ್ಳಿ 45 ಮಿ.ಮೀ, ಗೋಗಿ 38.6 ಮಿ.ಮೀ ಮಳೆಯಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಸುನಿಲಕುಮಾರ ಯರಗೋಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT