ಶುಕ್ರವಾರ, ಸೆಪ್ಟೆಂಬರ್ 25, 2020
25 °C
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ; ಜಿಲ್ಲೆಯ ವಿವಿಧೆಡೆ ಪೂಜೆ

ಯಾದಗಿರಿ ಜಿಲ್ಲೆಯಲ್ಲಿ ರಾಮ ಭಕ್ತರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಶ್ರೀರಾಮ ಮಂದಿರ ಶಿಲಾನ್ಯಾಸ ಸಂದರ್ಭವನ್ನು ಜಿಲ್ಲೆಯಾದ್ಯಂತ ವಿಶೇಷ ಪೂಜೆಯೊಂದಿಗೆ ಸಂಭ್ರಮಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು.

ಶಾಸಕರ ಸಂಪರ್ಕ ಕಚೇರಿ: ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ದೇಶವೇ ಮೆಚ್ಚುವ ಆಡಳಿತ ನೀಡುತ್ತಿದ್ದಾರೆ ಎಂದು ಶಾಸಕ ವೆಂಕಟರೆಡ್ಡಿಗೌಡ ಮದ್ನಾಳ ಹೇಳಿದರು. ನಗರದ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿ ಬಳಿಯ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ, ಮುಖಂಡರಾದ ಶರಣಗೌಡ ಬಾಡಿಯಾಲ, ಮಹಾದೇವಪ್ಪ ಯಲ್ಸತ್ತಿ, ಖಂಡಪ್ಪ ದಾಸನ, ನಗರ ಘಟಕದ ಅಧ್ಯಕ್ಷ ಸುರೇಶ ಅಂಬಿಗೇರ, ನಗರಸಭೆ ಸದಸ್ಯರಾದ ಹಣಮಂತ ಇಟಗಿ, ವಿಲಾಸ ಪಾಟೀಲ, ಸ್ವಾಮಿದೇವ ದಾಸನಕೇರಿ, ಪರಶುರಾಮ ಕುರಕುಂದಿ, ಮಾರುತಿ ಕಲಾಲ್,  ನಾಗಪ್ಪ ಬೆನಕಲ್ ಇದ್ದರು.

ಜಿಲ್ಲಾ ಬಿಜೆಪಿ ಕಚೇರಿ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ಶ್ರೀರಾಮಚಂದ್ರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಕರ ಸೇವಕರಾಗಿ ಸೇವೆಸಲ್ಲಿಸಿದ್ದ ರಾಜಪ್ಪ ಸೈದಾಪುರ ಅವರನ್ನು ಸನ್ಮಾನಿಸಿದರು.

ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ, ಲಲಿತಾ ಅನಪುರ, ಸಾಬಣ್ಣ ಬೋರಬಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ್ ನಾದ, ವೆಂಕಟರೆಡ್ಡಿ ಅಬ್ಬೆತುಮಕೂರು, ನಗರ ಮಂಡಲ ಅಧ್ಯಕ್ಷ ಸುರೇಶ್ ಅಂಬಿಗೇರ, ಅಂಬಯ್ಯ ಶಾಬಾದಿ, ಮಾರುತಿ ಕಲಾಲ, ವಿಲಾಸ್ ಪಾಟೀಲ, ಹಣಮಂತ ಇಟಗಿ, ಶರಣಗೌಡ ಅಲ್ಲಿಪುರ, ವೀಣಾ ಮೋದಿ, ರಮಾದೇವಿ ಕವಲಿ, ನಗರ ಪ್ರಧಾನ ಕಾರ್ಯದರ್ಶಿ ಶರಣು ಆಶನಾಳ, ಮೌನೇಶ್ ಬೆಳಗೇರಾ, ಲಕ್ಷ್ಮಣ ಮೇದಾ, ಮಲ್ಲು ಕೋಲಿವಾಡ, ಬಸವರಾಜ ಗೊಂದೆನೂರ, ಶಿವರಾಜ್ ಜಕಾತಿ, ದೀಪಕ್ ಪದ್ದರ್, ಗೋವಿಂದ ಚಾವ್ಹಾಣ್ ಇದ್ದರು.

ಬೆಳಗೇರಾದಲ್ಲಿ ಸಂಭ್ರಮ: ತಾಲ್ಲೂಕಿನ ಬೆಳಗೇರಾ ಗ್ರಾಮದ ಆಂಜನೇಯ ದೇವಸ್ಥಾನ ಆವರಣದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಗ್ರಾಮದ ಹಿಂದು ಯುವಕರ ಬಳಗ ಹಾಗೂ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿದ್ದಲಿಂಗಯ್ಯ ಸ್ವಾಮಿ, ಲಕ್ಷ್ಮಣ ಮಾಸ್ಟರ್, ಶಂಕರ ಬಸುನಾಯಕ, ಸಾಬಣ್ಣ ಮಡಿವಾಳ, ಅಶೋಕ ಮಾಸ್ಟರ್, ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮೌನೇಶ ಬೆಳಗೇರಾ, ಶಿಕ್ಷಕ ವೆಂಕಟೇಶ, ಕಾಶಿನಾಥ, ನಿಜಲಿಂಗಪ್ಪ, ಬಸವರಾಜ, ಹಣಮಂತ ಫೋಟೋಗ್ರಾಫರ್, ಬಸವರಾಜ, ದೇವು ಯಲ್ಹೇರಿ, ದೇವರಾಜಗೌಡ, ತಾಯಪ್ಪ ದೇವಕರ್, ಆಂಜಿನೇಯ ಇದ್ದರು.

ಮೌನೇಶ್ವರ ದೇವಸ್ಥಾನ: ನಗರದ ಮೌನೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ರಾಮಚಂದ್ರನ ಭಾವಚಿತ್ರಕ್ಕೆ ದೇವಸ್ಥಾನ ಸಮಿತಿಯಿಂದ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಹೆಂದೆ, ನಗರಸಭೆ ಸದಸ್ಯೆ ಲಲಿತಾ ಅನಪುರ, ದೇವಸ್ಥಾನ ಸಮಿತಿ ಸದಸ್ಯ ಸಿದ್ದಪ್ಪ ಹೊಟ್ಟಿ, ನ್ಯಾಯವಾದಿ ಗುರುಸಿದ್ದಪ್ಪ ಕೋರಿ, ಅಯ್ಯಣ್ಣ ಹುಂಡೇಕಾರ್, ಹನುಮಾನ ದಾಸ ಮುಂದಡಾ, ಮಹೇಶ್ಚಂದ್ರ ವಾಲಿ, ರಮೇಶ ಪಾಸಮೇಲ, ಚಂದಣ್ಣ ಹಾಲಭಾವಿ, ಗಂಗಣ್ಣ ಸಜ್ಜನ್, ಬಸವಂತ್ರಾಯಗೌಡ ಮಾಲಿ ಪಾಟೀಲ್, ಸದಾಶಿವಪ್ಪ ಮಾಸ್ಟರ್, ರಾಜೇಂದ್ರ ಗುತ್ತೇದಾರ, ವಿರೇಶ ನೆಲೋಗಿ, ರಾಜು ಸೈದಾಪುರ, ಅಂಬಯ್ಯ ಶಾಬಾದಿ ಇದ್ದರು.

ಶ್ರೀರಾಮ ಸೇನೆ ಜಿಲ್ಲಾ ಘಟಕ: ನಗರದ ಗಂಜ್ ಆವರಣದಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಶ್ರೀರಾಮ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಾಂಕ ನಾಯಕ, ತಾಲ್ಲೂಕು ಅಧ್ಯಕ್ಷ ಸಂದೀಪ ಮಹೇಂದ್ರಕರ್, ಮುಖಂಡರಾದ ಹಣಂತ್ರಾಯ ಪಾಟೀಲ, ರಘುರಾಮ್, ಸುಭಾಷ ದೇವದುರ್ಗ, ಸಂತೋಷ ಮಗ್ಗಾ, ರಾಕೇಶ ನಾಯಕ, ಪವನ ನಾಯಕ, ಆಕಾಶ ಚವ್ಹಾಣ್‌, ಭೀಮು ನಾಯಕ, ಸುರೇಶ ರಾಯಚೂರ, ಶರಣಮ್ಮ, ಚನ್ನಬಸಮ್ಮ ಪಾಟೀಲ, ಮೀನಾಕ್ಷಿ ಸಾವೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು