ಯಾದಗಿರಿ: ಕೆಂಭಾವಿಯಲ್ಲಿ ನವೆಂಬರ್ 4ರಂದು ಪಥಸಂಚಲನಕ್ಕೆ ಅನುಮತಿ ಕೋರಿ ಆರ್ಎಸ್ಎಸ್ ಮನವಿ ಸಲ್ಲಿಸಿದ ಬಳಿಕ ಇದೀಗ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಸ್ವಾಭಿಮಾನಿ ಪ್ರೊ. ಜಿ.ಕೃಷ್ಣಪ್ಪ ಬಣ) ಶಹಾಪುರ ತಾಲ್ಲೂಕು ಘಟಕ ಹಾಗೂ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಅದೇ ದಿನ ಪಥಸಂಚಲನಕ್ಕೆ ತಮಗೂ ಅವಕಾಶ ನೀಡಬೇಕು ಎಂದು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.

ಆರ್ಎಸ್ಎಸ್ ಕಾರ್ಯಕರ್ತರು ಅನುಮತಿ ಕೋರಿ ಅ.27ರಂದು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ಹಂತದಲ್ಲಿತ್ತು. ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನೀಡಬಾರದು ಎಂದು ಈ ಎರಡೂ ಸಂಘಟನೆಗಳು ಕೋರಿವೆ. ಒಂದು ವೇಳೆ ಆರ್ಎಸ್ಎಸ್ಗೆ ದೊಣ್ಣೆ ಸಮೇತ ಪಥಸಂಚಲನಕ್ಕೆ ಅನುಮತಿಸಿದರೆ ನಮಗೂ ಅದೇ ದಿನ ಸಂವಿಧಾನ ಪೀಠಿಕೆ, ನೀಲಿ ಬಾವುಟ ಮತ್ತು ಲಾಠಿ ಹಿಡಿದು ಪಥಸಂಚಲನ ಮಾಡಲು ಅವಕಾಶ ಕೊಡಬೇಕು’ ಎಂದು ಮನವಿ ಮಾಡಿವೆ.

‘ಆರ್ಎಸ್ಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತೆ. ಸಂವಿಧಾನ ಬಾಹಿರವಾಗಿ ದೊಣ್ಣೆ ಹಿಡಿದು ಪಥಸಂಚಲನ ಮಾಡಲು ಅನುಮತಿ ಕೇಳಿದ್ದಾರೆ. ಅವರು ಕೋಮುವಾದಿ, ಜಾತಿವಾದಿಗಳಾಗಿದ್ದು ಜನರಲ್ಲಿ ಭಯದ ವಾತಾವರಣ ಮೂಡಿಸುತ್ತಾರೆ. ನೋಂದಣಿ ಇಲ್ಲದ ಸಂಘಟನೆಯಾಗಿದ್ದು, ಕೋಮುಗಲಭೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ, ಪಥಸಂಚಲನಕ್ಕೆ ಅನುಮತಿ ಕೊಡಬಾರದು’ ಎಂದು ಮನವಿಪತ್ರದಲ್ಲಿ ಉಲ್ಲೇಖಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.