ಬುಧವಾರ, ಆಗಸ್ಟ್ 17, 2022
26 °C

ಶಿಕ್ಷಕರ ಸಂಘಕ್ಕೆ ನಿರ್ದೇಶಕರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಣಸಗಿ ತಾಲ್ಲೂಕು ನಿರ್ದೇಶಕರ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಮಂಗಳವಾರ ರಾತ್ರಿ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ಬಸನಗೌಡ ವಠಾರ 292 ಮತ, ಕೊಟ್ರೇಶ ಕೋಳೂರ 231, ಹಾಜಿಮಲಂಗ 205, ಚಂದ್ರಶೇಖರ ಹೊಕ್ರಾಣಿ 181, ಅಮರೇಶ ಹುಜರತಿ 172, ಶ್ರೀಶೈಲ ತಳ್ಳಿಳ್ಳಿ 156, ಸದಾಶಿವಪ್ಪ ಕುಳಗೇರಿ 153 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಯಲ್ಲಪ್ಪ ಚಂದನಕೇರಿ, ಹಾಗೂ ಬಸಪ್ಪ ಯಲ್ಲಪ್ಪ ತಿಳಿಸಿದ್ದಾರೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಸವೇಶ್ವರ ವೃತ್ತದಲ್ಲಿ ಸಂಭ್ರಮಿಸಿದರು.

ಸಂಘದಲ್ಲಿ 10 ಸ್ಥಾನಗಳಿದ್ದು, ಮಹಿಳಾ ಮೀಸಲು 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಇನ್ನುಳಿದ 7 ಸ್ಥಾನಗಳಿಗಾಗಿ 19 ಜನ ಸ್ಪರ್ಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.