ಯಾದಗಿರಿ: ‘ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗಬಹುದು. ಆಗಬಾರದು ಎಂದು ಎಲ್ಲಿಯಾದರೂ ಇದೆಯಾ?’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಮಂಗಳವಾರ ಇಲ್ಲಿ ಪ್ರಶ್ನಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ನಲ್ಲಿ ಯಾರು ಬೇಕಾದರೂ ಸಿ.ಎಂ ಆಗಬಹುದು. ಬಿಜೆಪಿಯವರು ತಮ್ಮ ಪಕ್ಷದ ಹಿರಿಯ ದಲಿತ ನಾಯಕರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ಮತ್ತು ಮುಂದಿನ ಸಿ.ಎಂ ಅಭ್ಯರ್ಥಿ ಎಂದು ಘೋಷಿಸಲಿ’ ಎಂದು ಸವಾಲು ಹಾಕಿದರು.

ಪಕ್ಷದಲ್ಲಿನ ಸಿ.ಎಂ ಹುದ್ದೆ ಕುರಿತ ಅಪಸ್ವರಕ್ಕೆ ಪ್ರತಿಕ್ರಿಯಿಸಿದ ಅವರು, ‘ಅಣ್ಣ–ತಮ್ಮಂದಿರು ಇದ್ದಲ್ಲಿ ಹೊಟ್ಟೆಕಿಚ್ಚು ಇರುವುದು ಸಹಜ. ಮೂವರು ಸಹೋದರರು ಇದ್ದರೆ ಮೂರು ವಿಚಾರಗಳು ಇರುತ್ತವೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.