ಯಾದಗಿರಿ: ಬೀದಿ ಬದಿ ವ್ಯಾಪಾರಿಗಳು ನಮ್ಮ ಕುಟುಂಬವಿದ್ದಂತೆ, ಯಾವುದಕ್ಕಾದರೂ ವ್ಯಾಪಾರಿಗಳು ಯಾರಿಗೂ ಲಂಚ ಕೊಡುವ ಅವಶ್ಯವಿಲ್ಲ. ಒಂದು ವೇಳೆ ಯಾರಾದರೂ ಹಣ ತೆಗೆದುಕೊಂಡರೆ ನಮ್ಮ ಗಮನಕ್ಕೆ ತರಬೇಕು ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಕಟ್ಟುನಿಟ್ಟಾಗಿ ಸೂಚಿಸಿದರು.

ನಗರಸಭೆ, ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ಜೀವನೋಪಾಯ ಇಲಾಖೆ (ಡೇ-ನಲ್ಮ್ ಶಾಖೆ) ವತಿಯಿಂದ ನಗರದ ವಾಲ್ಮೀಕಿ ಭವನದ ಸಭಾಂಗಣದಲ್ಲಿ ಬೀದಿ ವ್ಯಾಪಾರಸ್ಥರಿಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀದಿಬದಿ ವ್ಯಾಪಾರಿಗಳಿಂದ ಟ್ರಾಫಿಕ್ ಸಮಸ್ಯೆಯಾಗಿ ಪ್ರಮುಖ ಬೀದಿಗಳಲ್ಲಿ ಮತ್ತು ಇತರೆ ಕಡೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎಂದು ಜನರು ನಗರಸಭೆಗೆ ದೂರು ಸಲ್ಲಿಸುತ್ತಿದ್ದಾರೆ. ಪಾದಚಾರಿಗಳಿಗೆ ಮತ್ತು ವಾಹನ ಚಾಲಕರಿಗೆ ಸರಳ ಸಂಚಾರಕ್ಕೆ ಅನೂಕೂಲ ಮಾಡಿಕೊಟ್ಟರೆ ಅಪಘಾತಗಳು ಸಂಭವಿಸುವುದು ನಿಲ್ಲುತ್ತದೆ. ಹೀಗಾಗಿ ನಗರಸಭೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಎಲ್ಲರೂ ಸಹಕಾರ ನೀಡಬೇಕು. ಪ್ಲಾಸ್ಟಿಕ್ ಮುಕ್ತ ನಗರವಾಗಿಸಬೇಕು ಮತ್ತು ಮನೆಯ ಸುತ್ತಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ರಸ್ತೆ ಬದಿ ವ್ಯಾಪಾರಸ್ಥರು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವ್ಯಾಪಾರ ವಹಿವಾಟು ನಡೆಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಯಾದಗಿರಿ ನಗರ ಸುಂದರವಾಗಿಸಬೇಕು. ಎಲ್ಲರೂ ಆರೋಗ್ಯಕರವಾಗಿರಬೇಕು ಎಂಬುದು ನಮ್ಮ ಇಚ್ಛಾಶಕ್ತಿಯೂ ಆಗಿದೆ. ಎಲ್ಲರೂ ನಗರಸಭೆಗೆ ಕೈಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಿಎಂ, ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಮೊದಲನೆ ಹಂತದಲ್ಲಿ ₹10 ಸಾವಿರ ಒಟ್ಟು 1,358 ಫಲಾನುಭವಿಗಳಿಗೆ, ಎರಡನೇ ಹಂತದಲ್ಲಿ ₹20 ಸಾವಿರ ರೂಗಳಂತೆ 636 ಫಲಾನುಭವಿಗಳಿಗೆ, ಮೂರನೇ ಹಂತದಲ್ಲಿ ₹50 ಸಾವಿರ ರೂಗಳಂತೆ 213 ಫಲಾನುಭವಿಗಳಿಗೆ ಸಾಲ ಕೊಡಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಪ್ರಭಾರ ಪೌರಾಯುಕ್ತ ರಜನಿಕಾಂತ ಶೃಂಗೇರಿ ಮಾತನಾಡಿ, ವ್ಯಾಪಾರಸ್ಥರು ನಿಗದಿತ ಸ್ಥಳದಲ್ಲಿಯೇ ವ್ಯಾಪಾರ ಮಾಡಿ ನಗರಸಭೆಗೆ ಸಹಕಾರ ನೀಡಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಇಲ್ಲಿಯವರೆಗೆ ಒಟ್ಟು 1,784 ಗುರುತಿನ ಚೀಟಿಯನ್ನು ನಗರಸಭೆಯಿಂದ ವಿತರಿಸಲಾಗಿದೆ. ನಗರದಲ್ಲಿ ಸ್ವಚ್ಛ ಹಾಗೂ ಉತ್ತಮವಾದ ವಸ್ತುಗಳನ್ನು ಮಾರಾಟ ಮಾಡಬೇಕು. ಸಾರ್ವಜನಿಕರಿಗೆ, ಸಾರಿಗೆ ಸಂಚಾರಕ್ಕೆ ಯಾವುದೇ ಅಡೆತಡೆ ಆಗದಂತೆ ತಮ್ಮ ವ್ಯಾಪಾರ ಮಾಡಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ಕೆ ವೈದ್ಯ ಪ್ರಾಸ್ತಾವಿಕ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ರುಖಿಯಾಬೇಗಂ, ಸದಸ್ಯೆ ಪ್ರಭಾವತಿ ಕಲಾಲ್, ನಾಮನಿರ್ದೇಶಿತ ಸದಸ್ಯ ವೆಂಕಟೇಶ, ಪೊಲೀಸ್ ಇಲಾಖೆಯ ರವಿ ರಾಠೋಡ್, ಆರೋಗ್ಯ ಇಲಾಖೆಯ ಡಾ.ಅನಿಲಕುಮಾರ, ಆರೋಗ್ಯ ನಿರೀಕ್ಷಕರಾದ ಶರಣಮ್ಮ ಮಂಜುನಾಥ, ಮಂಜುನಾಥ, ಸಿದ್ದಾರ್ಥ್, ಸಿಆರ್ಪಿಗಳಾದ ಸಾಬಮ್ಮ, ಅವ್ವಮ್ಮ, ಪ್ರೇಮಾ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.