ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ₹ 5.45 ಲಕ್ಷ ಉಳಿತಾಯ ಬಜೆಟ್

Last Updated 22 ಮಾರ್ಚ್ 2023, 5:45 IST
ಅಕ್ಷರ ಗಾತ್ರ

ಸುರಪುರ: ನಗರಸಭೆಯ 2023-24ನೇ ಸಾಲಿನ ₹5.45 ಉಳಿತಾಯ ಮುಂಗಡಪತ್ರವನ್ನು ಅಧ್ಯಕ್ಷೆ ಸುಜಾತಾ ಜೇವರ್ಗಿ ಮಂಗಳವಾರ ಮಂಡಿಸಿದರು.

ನಗರಸಭೆಯ ಸಭಾಂಗಣದಲ್ಲಿ ಜರುಗಿದ ಬಜೆಟ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಾರ್ಷಿಕ ಆದಾಯ ₹31.50 ಕೋಟಿ ಮತ್ತು ₹31.44 ಕೋಟಿ ಖರ್ಚುಗಳ ನಿರೀಕ್ಷೆ ಇದೆ ಎಂದು ತಿಳಿಸಿದರು.

ಪೌರಾಯುಕ್ತ ಪ್ರೇಮ್ ಚಾಲ್ರ್ಸ್ ಮತ್ತು ಲೆಕ್ಕಾಧಿಕಾರಿ ರವಿದಾಸ್ ರಾಠೋಡ್ ಮುಂಗಡ ಪತ್ರದ ಸಂಪೂರ್ಣ ವಿವರ ತಿಳಿಸಿದರು.

ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ, ಸದಸ್ಯರಾದ ವೇಣುಮಾಧವನಾಯಕ, ನರಸಿಂಹಕಾಂತ ಪಂಚಮಗಿರಿ, ನಾಸೀರ್ ಕುಂಡಾಲೆ, ಖಮರುಲ್ ನಾರಾಯಣಪೇಟ್ ಹಲವು ಸಲಹೆಗಳನ್ನು ನೀಡಿದರು.

₹5.75 ಕೋಟಿ 15ನೇ ಹಣಕಾಸು ಮುಕ್ತ ನಿಧಿಯಿಂದ, ₹3.20 ಕೋಟಿ ಎಸ್‍ಎಫ್‍ಸಿ ಮುಕ್ತ ನಿಧಿ, ₹5.10 ಕೋಟಿ ಎಸ್‍ಎಫ್‍ಸಿ ವೇತನ ಅನುದಾನ ಹಾಗೂ ₹5.07 ಕೋಟಿ ವಿದ್ಯುತ್ ಅನುದಾನ ನಗರಸಭೆಗೆ ಬರಲಿದೆ.

ನಗರಸಭೆ ಸ್ವಂತ ಆದಾಯ: ₹1.65 ಕೋಟಿ ಆಸ್ತಿ ತೆರಿಗೆ, ₹30 ಲಕ್ಷ ನಗರಸಭೆ ಕಟ್ಟಡಗಳ ಬಾಡಿಗೆ, ₹32 ಲಕ್ಷ ವ್ಯಾಪಾರ ಪರವಾನಗಿ ಶುಲ್ಕ.

ಅಂದಾಜು ಖರ್ಚು: ₹4.20 ಕೋಟಿ ವೇತನ, ₹4.10 ಕೋಟಿ ವಿದ್ಯುತ್ ಸಾಮಗ್ರಿ ಮತ್ತು ಬಿಲ್, ₹2.10 ಕೋಟಿ ರಸ್ತೆ ಕಾಮಗಾರಿ, ₹1.51 ಕೋಟಿ ಚರಂಡಿ ಕಾಮಗಾರಿ, ₹87 ಲಕ್ಷ ವಾಹನ ಖರೀದಿ.

ಪತ್ರಕರ್ತರ ಕಲ್ಯಾಣ ನಿಧಿ: ಇದೇ ಮೊದಲ ಬಾರಿಗೆ ಪತ್ರಕರ್ತರ ಕಲ್ಯಾಣ ನಿಧಿಗೆ ರೂ. 3 ಲಕ್ಷ ಕಾಯ್ದಿರಿಸಲಾಗಿದೆ. ಪತ್ರಕರ್ತರ ಸಂಘ ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿತ್ತು. ಈ ಹಣವನ್ನು ಪತ್ರಕರ್ತರ ಅಗತ್ಯ ವೈದ್ಯಕೀಯ ವೆಚ್ಚಕ್ಕೆ ನೀಡಬಹುದು ಎಂದು ತಿಳಿಸಲಾಗಿದೆ.

ಉಪಾಧ್ಯಕ್ಷ ಮಹೇಶ ಪಾಟೀಲ, ಎಇಇ ಶಾಂತಪ್ಪ ಹೊಸೂರು, ಸದಸ್ಯರಾದ ಮಾನಪ್ಪ ಚಳ್ಳಿಗಿಡ, ಜುಮ್ಮಣ್ಣ ಕೆಂಗೂರಿ, ಅಯ್ಯಣ್ಣ ಪೂಜಾರಿ, ಶಿವಕುಮಾರ ಕಟ್ಟಿಮನಿ, ಮೊಹ್ಮದ್ ಗೌಸ್ ಕಿಣ್ಣಿ, ಶರೀಫ್ ಮಹಿಬೂಬ್, ಸುರ್ವಣಾ ಎಲಿಗಾರ, ಪಾರ್ವತಿ, ಸಿದ್ದಲಿಂಗಮ್ಮ ಗೌಡಸಾನಿ, ಲಕ್ಷ್ಮೀ ಬಿಲ್ಲವ್, ಮುತ್ತಮ್ಮ ಅಕ್ಕಿ, ಲಲಿತಾ ಸತ್ಯಂಪೇಟೆ, ಪಾರ್ವತಿ ಹಾದಿಮನಿ, ಚೆನ್ನಮ್ಮ, ಕಂದಾಯ ಅಧಿಕಾರಿ ವೆಂಕಟೇಶ ಕಲಬುರ್ಗಿ, ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ, ಎಂಜನಿಯರ್ ಮಹೇಶ್ ಮಾಳಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT