ಯಾದಗಿರಿ: 10ನೇ ಅವಧಿಗೆ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದ್ದು, ಅವರ ಮುಂದೆ ಹಲವು ಹಳೆ ಸವಾಲುಗಳಿವೆ.

ಜಿಲ್ಲಾ ಕೇಂದ್ರವಾಗಿರುವ ನಗರದಲ್ಲಿ ಮುಖ್ಯವಾಗಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯಾಗಿ 14 ವರ್ಷಗಳಾದರೂ ಪ್ರಗತಿಯಲ್ಲಿ ಇನ್ನೂ ತಾಲ್ಲೂಕು ಕೇಂದ್ರದಂತೆ ಭಾಸವಾಗುತ್ತಿದೆ ಎನ್ನುವುದು ನಗರ ನಿವಾಸಿಗಳ ಆರೋಪವಾಗಿದೆ.

ನಗರದಲ್ಲಿ ಕೆಲ ವಾರ್ಡ್ಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೇ ಚರಂಡಿಯಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಹಲವಾರು ವರ್ಷಗಳಿಂದ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಜಾಕ್ವೆಕ್ ಪೂರ್ಣಗೊಂಡರೂ ಇನ್ನೂ ಉದ್ಘಾಟನೆಯಾಗಿಲ್ಲ. ಹೀಗಾಗಿ ನಗರಕ್ಕೆ 24X7 ನೀರು ಪೂರೈಕೆ ಕನಸಾಗಿಯೇ ಉಳಿದಿದೆ. ನಗರದಲ್ಲಿ ರಾಜಕಾಲುವೆಗಳು ಸಮರ್ಪಕವಾಗಿಲ್ಲ.

ಕಣ್ಣುಮುಚ್ಚಿದ ಟ್ರಾಫಿಕ್ ಸಿಗ್ನಲ್:

ಜಿಲ್ಲಾ ಕೇಂದ್ರದಲ್ಲಿ ರಾಷ್ಟ್ರೀಯ, ರಾಜ್ಯ, ಹೆದ್ದಾರಿಗಳು ಹಾದು ಹೋಗಿದ್ದು, ಅಂತರರಾಜ್ಯ ಗಡಿಯನ್ನು ಹೊಂದಿದೆ. ಆದರೆ ಇಲ್ಲಿನ ಹೆದ್ದಾರಿಗಳಲ್ಲಿರುವ ಟ್ರಾಫಿಕ್ ಸಿಗ್ನಲ್ಗಳು ಕೆಲಸ ಮಾಡುತ್ತಿಲ್ಲ. ಅಗತ್ಯ ಇರುವ ಕಡೆ ಬಳಕೆಯಾಗುತ್ತಿಲ್ಲ. ಇದರಿಂದ ಸಂಚಾರ ನಿಯಮಗಳು ಪಾಲನೆಯಾಗುತ್ತಿಲ್ಲ. ಪೊಲೀಸ್ ಇಲಾಖೆ ಸಮನ್ವಯ ಸಾಧಿಸಿ ಅವುಗಳ ದುರಸ್ತಿ ಕಾರ್ಯ ನಡೆಯಬೇಕಿದೆ.

ಸಿಸಿಟಿವಿ ಕ್ಯಾಮೆರಾಗಳ ಕೊರತೆ:

ನಗರದಲ್ಲಿ ಭದ್ರತಾ ದೃಷ್ಟಿಯಿಂದ ಕನಿಷ್ಠ ಪ್ರಮುಖ ವೃತ್ತಗಳಲ್ಲಾದರೂ ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಬೇಕು. ಆದರೆ, ನಗರದಲ್ಲಿ ಇದರ ಕೊರತೆ ಹೆಚ್ಚಾಗಿದೆ ಎಂಬುದು ಸಾರ್ವಜನಿಕರ ಆಪಾದನೆಯಾಗಿದೆ.

‘ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು, ಅವುಗಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾಗಳ ಅವಶ್ಯವಿದೆ. ಆದರೆ, ಪೊಲೀಸ್ ಇಲಾಖೆ, ನಗರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎನ್ನುತ್ತಾರೆ ನಗರ ನಿವಾಸಿ ನಾಗರಾಜ ಪಾಟೀಲ.

ಪಾಳು ಬಿದ್ದ ಪ್ರವಾಸಿತಾಣಗಳು:

ನಗರದ ಸಾರ್ವಜನಿಕ ಉದ್ಯಾನವಾದ ಲುಂಬಿನಿ ವನವು ಹಾಳು ಬಿದ್ದಿವೆ. ಕೋಟ್ಯಂತರ ಹಣ ಖರ್ಚು ಮಾಡಿದರೂ ನಿರ್ವಹಣೆ ಕೊರತೆ ಕಾಡುತ್ತಿದೆ. ಅಲ್ಲದೇ ಪ್ರವಾಸಿ ತಾಣವಾಗಿದ್ದರೂ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕೋವಿಡ್ ಸಂದರ್ಭದಲ್ಲಿ ತರಕಾರಿ ಮಾರುಕಟ್ಟೆ ವನಕೇರಿ ಲೇಔಟ್ಗೆ ಸ್ಥಳಾಂತರವಾಗಿದ್ದು, ಹಳೆ ಮಾರುಕಟ್ಟೆಯಲ್ಲಿ ಯೋಜನೆ ಮಾತ್ರ ರೂಪುಗೊಂಡಿದ್ದು, ಕಟ್ಟಡ ಸೇರಿದಂತೆ ಯಾವುದೇ ಕಾಮಗಾರಿ ಪ್ರಗತಿಗೊಂಡಿಲ್ಲ.

ಹಾಳಾದ ರಸ್ತೆಗಳು:

ನಗರದ ಹೊಸ ಬಸ್ ನಿಲ್ದಾಣ, ಗಂಜ್ ರಸ್ತೆ, ಚಿತ್ತಾಪುರ ರಸ್ತೆ, ಮಹಾತ್ಮಗಾಂಧಿ ವೃತ್ತ, ಸೇಡಂ ರಸ್ತೆ, ಹೊಸಳ್ಳಿ ಕ್ರಾಸ್, ರೈಲ್ವೆ ಸ್ಟೇಷನ್ ರಸ್ತೆ, ಎಲ್ಐಸಿ ಕಚೇರಿ, ಲುಂಬಿನಿ ವನ ಮುಂಭಾಗ ಸೇರಿದಂತೆ ಇನ್ನಿತರ ಕಡೆ ಗುಂಡಿ ಬಿದ್ದಿದೆ.

ಹೊಸ ಜಾಕ್ವೆಲ್ ಉದ್ಘಾಟನೆ:

2011ರ ಜನಸಂಖ್ಯೆಗೆ ಅನುಗುಣವಾಗಿ ಹಳೆ ಜಾಕ್ವೆಲ್ ಇದೆ. ಆದರೆ, ಅಲ್ಲಿಂದ ಇಲ್ಲಿಯತನಕ ಜನಸಂಖ್ಯೆ ಹೆಚ್ಚಳವಾಗಿದೆ. ಆದರೆ, ಹೊಸ ಜಾಕ್ವೆಲ್ ಇನ್ನೂ ಆರಂಭವಾಗಿಲ್ಲ.

ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು. ನಗರದ ಅಭಿವೃದ್ಧಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುವೆ

-ಲಲಿತಾ ಅನಪುರ ನಗರಸಭೆ ನೂತನ ಅಧ್ಯಕ್ಷೆ ಯಾದಗಿರಿ

ನಗರದಲ್ಲಿ ಆಡಳಿತ ನಡೆಯುವವರು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಆ ಮೂಲಕ ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು

- ಸಿದ್ದಯ್ಯ ಸ್ವಾಮಿ ಯಾದಗಿರಿ ನಿವಾಸಿ

ಕತ್ತಲಲ್ಲಿ ವೃತ್ತಗಳು ಯಾದಗಿರಿಯ ಹಲವು ವೃತ್ತಗಳಲ್ಲಿ ರಾತ್ರಿಯ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ನಗರವು ಹಾಳು ಕೊಂಪೆಯಂತೆ ಭಾಸವಾಗುತ್ತಿದೆ. ಲಾಲ್ ಬಹದ್ದರೂರ್ ಶಾಸ್ತ್ರಿ ನೇತಾಜಿ ಸುಭಾಷಚಂದ್ರ ಬೋಸ್ ವೃತ್ತ ಸೇರಿ ಇತರೆ ವೃತ್ತಗಳಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ಜಿಲ್ಲಾ ಕೇಂದ್ರವಾದರೂ ಬೆಳಕು ಕಾಣುತ್ತಿಲ್ಲ. ವೃತ್ತಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪಗಳು ಹಾಗೂ ದೀಪಗಳಿಂದ ಬೆಳಕು ಹೊಳೆಯುಂತಹ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎನ್ನುವುದು ನಗರ ನಿವಾಸಿಗಳ ಒತ್ತಾಯವಾಗಿದೆ. ನಗರ ಸೌಂದರ್ಯೀಕರಣ: ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ. ಆವಾಸ ಯೋಜನೆಗಳು ನನೆಗುದಿಗೆ ಬಿದ್ದಿವೆ. ಉದ್ಯಾನಗಳು ನಿರ್ವಹಣೆಯ ಕೊರತೆ ಇದೆ. ಹಲವು ಕಡೆ ಒತ್ತುವರಿ ಆಗಿವೆ. ಕಲಬುರಗಿಯ ಅಪ್ಪನ ಕೆರೆಯಂತೆ ನಗರದ ದೊಡ್ಡ ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ. ಯಾದಗಿರಿ ನಗರವೂ ಐತಿಹಾಸಿಕ ತಾಣವಾಗಿದೆ. ಇದನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.