ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ದೇವದಾಸಿ ಪದ್ಧತಿ ನಿರಾಕರಿಸಿದ ಯುವತಿಯ ರಕ್ಷಣೆ

Last Updated 13 ಜೂನ್ 2021, 16:01 IST
ಅಕ್ಷರ ಗಾತ್ರ

ಸುರಪುರ (ಯಾದಗಿರಿ ಜಿಲ್ಲೆ): ದೇವದಾಸಿ ಆಗುವಂತೆ ಕುಟುಂಬ ಸದಸ್ಯರು ಹಾಕಿದ ಒತ್ತಡವನ್ನು ಧಿಕ್ಕರಿಸಿ ಮನೆಯಿಂದ ತಪ್ಪಿಸಿಕೊಂಡ ಯುವತಿಯೊಬ್ಬರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿ, ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ನೀಡಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗ್ರಾಮವೊಂದರ ಯುವತಿ ಪ್ರೌಢಶಾಲೆಯವರೆಗೆ ಶಿಕ್ಷಣ ಪಡೆದಿದ್ದಾರೆ. ತಾಯಿ ದೇವದಾಸಿಯಾಗಿದ್ದು, ಹಿರಿಯ ಸಹೋದರಿಗೆ ಮದುವೆಯಾಗಿದೆ.

‘ಅಕ್ಕನ ಗಂಡನನ್ನೇ ಮದುವೆಯಾಗುವಂತೆ ಸಂಬಂಧಿಕರು ಒತ್ತಾಯಿಸಿದಾಗ ಯುವತಿ ನಿರಾಕರಿಸಿದ್ದಾರೆ. ಮುತ್ತು ಕಟ್ಟಿಕೊಳ್ಳಲು (ದೇವದಾಸಿ ಪದ್ಧತಿ) ಒಪ್ಪದಿದ್ದಾಗ, ಕಿರುಕುಳ ನೀಡಲಾಗಿದೆ. ಇದರಿಂದ ಹೆದರಿದ ಯುವತಿ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಸಂಬಂಧಿಕರೊಬ್ಬರನ್ನು ಸಂಪರ್ಕಿಸಿದಾಗ, ನೆರವು ಸಿಕ್ಕಿದೆ’ ಎಂದು ಮೂಲಗಳು ತಿಳಿಸಿವೆ.

***
ಶೋಷಿತರು ಶಿಕ್ಷಣ ಪಡೆಯಬೇಕು. ಸಂಘಟನೆಯವರು ಈ ದೇವದಾಸಿ ಪದ್ಧತಿಯನ್ನು ಇಲ್ಲವಾಗಿಸಬೇಕು. ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು.
-ರೇಣುಕಾ, ನೊಂದ ಯುವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT