ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | 30ನೇ ದಿನಕ್ಕೆ ಕಾಲಿರಿಸಿದ ಧರಣಿ

Published 19 ಡಿಸೆಂಬರ್ 2023, 15:57 IST
Last Updated 19 ಡಿಸೆಂಬರ್ 2023, 15:57 IST
ಅಕ್ಷರ ಗಾತ್ರ

ಯಾದಗಿರಿ: ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಶಾಸ್ತ್ರಿ ನಗರ, ಮದನಪುರ ಸ್ಲಂ ನಿವಾಸಿಗಳ ನಡೆಸುತ್ತಿರುವ ಹೋರಾಟವು 30ನೇ ದಿನಕ್ಕೆ ಕಾಲಿಟ್ಟಿದೆ.

ಮಂಗಳವಾರ ರಾತ್ರಿ ಮಹಿಳೆಯರು ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಅಹೋರಾತ್ರಿಯ ಧರಣಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಗೋಳು ಕೇಳುವವರೆಗೂ ನಮಗೆ ಯಾವುದೇ ಸಂಘರ್ಷವಾದರೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಮಹಿಳೆಯರು ಹೇಳಿದರು.

ಹೈಕೋರ್ಟ್ ಆದೇಶವಿದೆ. ಸ್ಲಂ ಬೋರ್ಡ್ ಕೊಳಚೆ ಪ್ರದೇಶವೆಂದು ಘೋಷಿಸಿದೆ. ನಾವು 50 ವರ್ಷಗಳಿಂದ ಸರ್ಕಾರದ ಜಾಗದಲ್ಲಿದ್ದೇವೆ. ಅಕ್ರಮ ಸಕ್ರಮದಲ್ಲಿ ಹಣ ತುಂಬಿದ್ದೇವೆ. ಎಂದು ಮಹಿಳೆಯರು ಗೋಳು ತೋಡಿಕೊಂಡರು.

ಸ್ಲಂ ನಿವಾಸಿಗಳ ಗೌರವಾಧ್ಯಕ್ಷ ವೈಜನಾಥ ಹಿರೇಮಠ, ಮದನಪುರ ಸ್ಲಂ ನಿವಾಸಿಗಳ ಸಂಘದ ಅಧ್ಯಕ್ಷ ಆನಂದ ಭೀಮಣ್ಣ ನಾಟೇಕರ್, ಮುಖಂಡರಾದ ಅಬ್ದುಲ್ ಗಫೂರ್, ಸಾಬಣ್ಣ, ಮಹಮ್ಮದ್, ಗೌರಮ್ಮ, ವಿಜಯಲಕ್ಷ್ಮೀ, ಮುನಿರ್ ಅಹ್ಮದ್, ಹಂಪಮ್ಮ, ರಾಮಚಂದ್ರ, ಖಾಜಾ, ಕೃಷ್ಣ ವಾಟ್ಕರ್, ಗಂಗಮ್ಮ, ಬಸವರಾಜ ಗಂಗಣ್ಣ, ದೇವಿಂದ್ರಪ್ಪ, ಗಂಗಣ್ಣ, ಶಿವಕುಮಾರ, ತಿಮ್ಮವ್ವ, ಈಶಪ್ಪ, ಜೊಹರಾಬಿ, ಉಸ್ಮಾನ್ ಅಬ್ಬಾಸಲಿ, ಮಹೆಬೂಬಿ ಸೇರಿ  ಸ್ಲಂ ನಿವಾಸಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT