ಪೌರಕಾರ್ಮಿಕರಿಗೆ ಸವಾಲಾದ ಥಂಡಿ
ಪೌರಕಾರ್ಮಿಕರ ಸೇವೆ ಸಾಮಾನ್ಯವಾಗಿ ಬೆಳಗಿನ ಜಾವ 4.30ಕ್ಕೆ ಆರಂಭವಾಗುತ್ತದೆ. ನಗರವನ್ನು ಸ್ವಚ್ಛಗೊಳಿಸಿ ತ್ಯಾಜ್ಯ ಚರಂಡಿ ಸ್ವಚ್ಛ ಮಾಡುವ ಪೌರ ಕಾರ್ಮಿಕರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಬೆಳಿಗ್ಗೆ ಅಲ್ಲಲ್ಲಿ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ನಾಗರಿಕರ ಜತೆಗೆ ಪೌರಕಾರ್ಮಿಕರು ಸೇರಿಕೊಂಡಿದ್ದು ಕಂಡುಬಂತು. ಅತಿಯಾದ ಥಂಡಿ ಬೆಳಗಿನ ವ್ಯಾಪಾರಕ್ಕೂ ಕುತ್ತು ತಂದಿದೆ.