ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ವಿದ್ಯುತ್ ಪರಿವರ್ತಕ ನಿರ್ವಹಣೆ ಅಭಿಯಾನ

Last Updated 8 ಮೇ 2022, 4:04 IST
ಅಕ್ಷರ ಗಾತ್ರ

ಸುರಪುರ: ಇಂಧನ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಸುರಪುರ ಕ್ಷೇತ್ರದ ಉಪ ವಿಭಾಗದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಟ್ಟು 846 ವಿದ್ಯುತ್ ಪರಿವರ್ತಕಗಳಿದ್ದು, ಇವುಗಳ ನಿರ್ವಹಣೆಗೆ ಸರ್ಕಾರದ ಆದೇಶದಂತೆ ಜೆಸ್ಕಾಂ ಇಲಾಖೆಯ ಸಿಬ್ಬಂದಿ ಸನ್ನದ್ಧವಾಗಿ ನಿಂತು ಸುಡು ಬಿಸಿಲನ್ನು ಲೆಕ್ಕಿಸದೆ ನಿರ್ವಹಣೆ ಮಾಡಿ ಜನರ ಪ್ರಶಂಸೆಗೆ ಪಾತ್ರರಾದರು.

ಕೆಟ್ಟು ಹೋಗುವ ವಿದ್ಯುತ್ ಪರಿವರ್ತಕಗಳನ್ನು ಗುರುತಿಸಿ ಸ್ಥಳದಲ್ಲಿಯೇ ನಿರ್ವಹಣೆ ಮಾಡಿ ಭವಿಷ್ಯದಲ್ಲಿ ಸಂಭವನೀಯ ಅಪಘಾತಗಳನ್ನು ದೂರು ಮಾಡುವ ವಿನೂತನ ಪ್ರಯತ್ನ ಇದ್ದಾಗಿದ್ದು, ಜೆಸ್ಕಾಂ ಅಧಿಕಾರಿಗಳ ಜೊತೆ ಅನೇಕ ಸಿಬ್ಬಂದಿಕೈ ಜೋಡಿಸಿ 150 ಪರಿವರ್ತಕಗಳ ಸಂರಕ್ಷಣೆ ಮಾಡಿದರು.

ಜೆಸ್ಕಾಂ ಎಇಇ ಈರಣ್ಣ ಅಳ್ಳಿಚಂಡಿ ಮಾತನಾಡಿ, ‘ವಿದ್ಯುತ್ ಪರಿವರ್ತಕಗಳಿಗೆ ಹೊಸ ಕೇಬಲ್ ಅಳವಡಿಕೆ, ತಂತಿ ಬೇಲಿ ಹಾಕುವುದು, ಪ್ರೊಟೆಕ್ಷನ್ ಕಿಟ್ ಅಳವಡಿಸುವುದು, ಅರ್ಥಿಂಗ್ ಮಾಡುವುದು, ಆಯಿಲ್ ಲಿಕೇಜ್ ತಡೆಗಟ್ಟುವುದು ಸೇರಿದಂತೆ ಎಲ್ಲಾ ರೀತಿಯಿಂದಲೂ ಟಿಸಿ ಸಜ್ಜು ಗೊಳಿಸಿ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ಮಾಡುವುದು ಈ ಅಭಿ ಯಾನದ ಮುಖ್ಯ ಉದ್ದೇಶ’ ಎಂದರು.

‘ಮೇ 15ರೊಳಗಾಗಿ ಎಲ್ಲ ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಮಾಡಲು ಸೂಚಿಸಲಾಗಿದೆ. ನಮ್ಮ ಇಲಾಖೆಯ ಸಿಬ್ಬಂದಿಗಳು ರಣ ಬಿಸಿಲು ಲೆಕ್ಕಿಸದೆ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸೇವಾ ಕಾರ್ಯವನ್ನು ಎಷ್ಟು ಬಣ್ಣಿಸಿದರು ಸಾಲದು’ ಎಂದರು.

ಜೆಸ್ಕಾಂ ಅಧಿಕಾರಿಗಳಾದ ಶಾಂತಕುಮಾರ, ಶ್ರೀಶೈಲ ತಮದಡ್ಡಿ, ಪ್ರಮೋದ ಕುಮಾರ, ಮಂಜು ಭಂಡಾರಿ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT