ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ | ಅತ್ಯಾಚಾರ ಸಂತ್ರಸ್ತೆ ಮನೆಗೆ ವಾಲ್ಮೀಕಿ ಸಮಾಜದ ಮುಖಂಡರ ಭೇಟಿ

ಹುಣಸಗಿ: ತಾಲ್ಲೂಕಿನ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣ
Published : 22 ಸೆಪ್ಟೆಂಬರ್ 2024, 16:28 IST
Last Updated : 22 ಸೆಪ್ಟೆಂಬರ್ 2024, 16:28 IST
ಫಾಲೋ ಮಾಡಿ
Comments

ಹುಣಸಗಿ: ತಾಲ್ಲೂಕಿನ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಮನೆ ಭೇಟಿ ನೀಡಿದ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸಮಾಜದ ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ ಮಾತನಾಡಿ, ‘ಪ್ರಕರಣಕ್ಕೆ ಕುಮ್ಮಕ್ಕು ನೀಡಿದ ಜನರನ್ನು ಕೂಡಲೇ ಬಂಧಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಸಾಮೂಹಿಕ ದಲಿತ ಸಂಘಟನೆಗಳಿಂದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಅನ್ಯಾಯ ಆಗಿದ್ದರೂ ಶೋಷಿತರ ಪರ ಸರ್ಕಾರ ತುಟಿ ಬಿಚ್ಚುತ್ತಿಲ್ಲ’ ಎಂದು ಹರಿಹಾಯ್ದರು.

ಜಿಲ್ಲಾ ಘಟಕದ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ ಮಾತನಾಡಿ,‘ಆಡಳಿತರೂಡ ಸಚಿವರು ಕೂಡ ಭೇಟಿ ನೀಡಿ ಸಾಂತ್ವನ ನೀಡದಿರುವುದು ಖಂಡನೀಯ’ ಎಂದರು.

ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಬಾಂಬೆಕರ್ ಮಾತನಾಡಿದರು.

ಕುಟುಂಬಕ್ಕೆ ಪಡಿತರ ವಿತರಣೆ: ಸಂತ್ರಸ್ತೆಯ ಕುಟುಂಬಕ್ಕೆ ಮಹರ್ಷಿ ವಾಲ್ಮೀಕಿ ಸಮಾಜದ ಮುಖಂಡರು ಒಂದು ಕ್ವಿಂಟಲ್ ಜೋಳ, ಅಕ್ಕಿ ಮೂಟೆ ವಿತರಿಸಿದರು.

ಮುಖಂಡರಾದ ಸಿದ್ದನಗೌಡ ಕರಿಬಾವಿ, ಗುರು ಹುಲಕಲ್, ಬಸನಗೌಡ ಮಾಲಿಪಾಟೀಲ್, ದೇವಿಂದ್ರಪ್ಪ ಬಳಿಚಕ್ರ, ಸೋಮಣ್ಣ ಮೇಟಿ, ಭೀಮರಾಯ ದೊಡ್ಡಮನಿ, ರಮೇಶ ದೊರಿ ಆಲ್ದಾಳ, ವೆಂಕಟೇಶ ಬೇಟೆಗಾರ, ಭೀಮನಗೌಡ, ರಮೇಶ ಬಿರಾದಾರ, ಬಸವರಾಜ ಹವಾಲ್ದಾರ್, ಭೀಮನಗೌಡ ಬೈಲಾಪುರ, ನಂದಪ್ಪ ಪೀರಾಪೂರ, ಶರಣಪ್ಪ ಗುಳಬಾಳ, ಬಸವರಾಜ ದೊಡ್ಡಮನಿ, ಕಾಶಿನಾಥ ಹಾದಿಮನಿ, ಬಸವರಾಜ ಕಟ್ಟಿಮನಿ ಕಾಮನಟಗಿ, ಸಂಗಮೇಶ ಮ್ಯಾಗೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT