ಮಂಗಳವಾರ, ಜನವರಿ 28, 2020
20 °C

ಯರಗೋಳ: ವಿದ್ಯಾರ್ಥಿಗಳಿಂದ ಐತಿಹಾಸಿಕ ಸ್ಥಳಗಳ ವೀಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಐತಿಹಾಸಿಕ ಅಧ್ಯಯನ ಮಾಡಬೇಕು ಎಂದು ಮುಖ್ಯ ಶಿಕ್ಷಕ ಚಂದ್ರಪ್ಪ ಗುಂಜನೂರ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು  ಸರ್ಕಾರಿ ಪದವಿ ಪೂರ್ವ ಕಾಲೇಜು (ಪೌಢ ವಿಭಾಗ) ವತಿಯಿಂದ ಬುಧವಾರ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಐತಿಹಾಸಿಕ ಸ್ಥಳಗಳ ಪರಿಚಯ ಉದ್ದೇಶಿಸಿ ಅವರು ಮತನಾಡಿದರು.

ಶಿಕ್ಷಕ ಉಮೇಶ ನರಗುಂದ ಮಾತನಾಡಿ, ಗ್ರಾಮದ ಗವಿಸಿದ್ಧಲಿಂಗೇಶ್ವರ ಮಠವು ಪ್ರಾಚೀನ ಕಾಲದಲ್ಲಿ ಅಧ್ಯಯನ ಕೇಂದ್ರವಾಗಿತ್ತು. ರಾಮಲಿಂಗೇಶ್ವರ ದೇವಸ್ಥಾನ ಗುಡ್ಡದಲ್ಲಿ ರಾಮನು ವನವಾಸದ ಸಮಯ ದಲ್ಲಿ ಕೆಲವು ದಿನಗಳು ವಿಶ್ರಾಂತಿ ಪಡೆಯಲು ತಂಗಿದ್ದನ್ನು ಎನ್ನುವ ನಂಬಿಕೆಯಿದೆ. ಉತ್ತರಾದಿ ಮಠದ ಯತಿಗಳಾದ ಠೀಕಾಚಾರ್ಯರು 13ನೇ ಶತಮಾನದಲ್ಲಿ ನ್ಯಾಯಸುಧ ಗ್ರಂಥವನ್ನು ರಚಿಸಿ ಜಗತ್ತಿಗೆ ಕೊಟ್ಟಿದ್ದಾರೆ ಎಂದು ವಿದ್ಯಾರ್ಥಿಗಳಿಗೆ  ಮಾಹಿತಿ ನೀಡಿದರು. ಸುನೀಲ, ಲಕ್ಷ್ಮಣ್, ಬಸಮ್ಮ, ಗಂಗಾ ಹಾಡು, ಕುಣಿತ, ಹಾಸ್ಯ, ಮಿಮಿಕ್ರಿ, ನಾಟಕ ಪ್ರಸ್ತುತ ಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಚನ್ನಬಸಪ್ಪ, ಕಾರ್ಯಕ್ರಮಾಧಿಕಾರಿ ಶೈಲಜಾ, ಶಿಕ್ಷಕರಾದ ಮರೆಪ್ಪ, ಉಮೇಶ್, ಗೀತಾ, ನಾಜಿಯಾ, ಶಶಿಕಲಾ, ರಾಹುಲ್, ಶರಣು, ಸಾಬಮ್ಮ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು