ಭಾನುವಾರ, ಜನವರಿ 23, 2022
24 °C

ಐಕೂರು to ಬೆಂಗಳೂರು; 500 ಕಿ.ಮೀ ಪಾದಯಾತ್ರೆ ಆರಂಭಿಸಿದ ಅಪ್ಪು ಅಭಿಮಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಇರುವ ಸ್ಥಳಕ್ಕೆ ಹೋಗಿ ಗೌರವ ಸಲ್ಲಿಸಲು ಅಂಗವಿಕಲ ಅಭಿಮಾನಿಯೊಬ್ಬರು ಸುಮಾರು 500 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ.

ವಡಗೇರಾ ತಾಲ್ಲೂಕಿನ ಐಕೂರು ಗ್ರಾಮದ ಅಂಗವಿಕಲ ರವಿಕುಮಾರ್ ಅವರು ಬುಧವಾರ ಬೆಳಿಗ್ಗೆ 5ರಿಂದ ಪಾದಯಾತ್ರೆ ಕೈಗೊಂಡರು.

ಐಕೂರು ಗ್ರಾಮದಿಂದ ಬೆಂಗಳೂರು ನಗರಕ್ಕೆ ಸುಮಾರು 500 ಕಿ.ಮೀ. ದೂರವಿದೆ. ಕೈಯಲ್ಲಿ ಅಪ್ಪು ಭಾವಚಿತ್ರ ಹಿಡಿದುಕೊಂಡು ಸ್ವತಃ ಖರ್ಚಿನಲ್ಲಿ ಕಾಲ್ನಡಿಗೆ ಮೂಲಕ ತನ್ನ ನೆಚ್ಚಿನ ನಟನ ಸಮಾಧಿ ದರ್ಶನಕ್ಕೆ ತೆರಳುತ್ತಿದ್ದಾರೆ.

ಬುಧವಾರ ಸಂಜೆ ಸುರಪುರ ತಲುಪಿದ್ದು, ಅಲ್ಲೆ ವಾಸ್ತವ್ಯ ಹೂಡಿ ಬೆಳಗ್ಗೆ ತಮ್ಮ ಪ್ರಯಾಣ ಮುಂದುವರಿಸುವರು.

‘ಪುನೀತ್ ರಾಜ್‌ಕುಮಾರ್ ನನ್ನ ನೆಚ್ಚಿನ ನಟ. ಜನರಿಗೆ ಅವರು ಮಾಡಿದ ಸಹಾಯ ಎಂದಿಗೂ ಮರೆಯುವಂತಿಲ್ಲ. ಅವರ ಆದರ್ಶಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ. ತಂದೆಯ ಅನಾರೋಗ್ಯದ ಕಾರಣ, ಪುನೀತ್ ಅವರ ಅಂತಿಮ ದರ್ಶನಕ್ಕೆ ಹೋಗಲು ಆಗಲಿಲ್ಲ. ಇಂದು ಪಾದಯಾತ್ರೆಯ ಮೂಲಕ ಅಪ್ಪು ಸಮಾಧಿಯ ದರ್ಶನ ಮಾಡುಲು ಹೋಗುತ್ತಿದ್ದೇನೆ’ ಎಂದು ರವಿಕುಮಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು