ಯಾದಗಿರಿ: ನವಣೆ ಕಿಚಡಿ, ಸಜ್ಜೆ ಲಡ್ಡು, ರಾಗಿ ಡೋಕ್ಳಾ, ರಾಗಿ ಸಿಹಿ ಕಡಬು, ನವಣೆ ಪಾಯಸ, ಜೋಳದ ಲಡ್ಡು, ಜೋಳದ ಉಂಡೆ... ಹೀಗೆ ಸಾಲು ಸಾಲು ಖಾದ್ಯಗಳ ಲೋಕ ಅನಾವರಣಗೊಂಡಿದ್ದು ನಗರದ ಜಂಟಿ ಕೃಷಿ ನಿರ್ದೇಶಕರ ಸಭಾಂಗಣದಲ್ಲಿ.

ಕೃಷಿ ಇಲಾಖೆಯು ಬುಧವಾರ ಅಂತರರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ವಾಣಿಜ್ಯ ಮೇಳ-2025ರ ಅಂಗವಾಗಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಜಿಲ್ಲಾ ಮಟ್ಟದ ಪಾಕ ಸ್ಪರ್ಧೆ ಆಯೋಜನೆ ಮಾಡಿತ್ತು. ರೈತ ಮಹಿಳೆಯರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ರುಚಿರುಚಿಯ ಖಾದ್ಯಗಳೊಂದಿಗೆ ಸ್ಪರ್ಧೆಯಲ್ಲಿ ಸಂಭ್ರಮದಿಂದ ಭಾಗವಹಿಸಿ ತಮ್ಮ ಕೈಚಳಕವನ್ನು ತೋರಿದರು.

ಜಿಲ್ಲೆಯ 34 ಪಾಕ ಪ್ರವೀಣೆಯರು ತಾವು ತಯಾರಿಸಿ ತಂದಿದ್ದ ಅಪರೂಪದ ಖಾದ್ಯಗಳನ್ನು ಪ್ರದರ್ಶನಕ್ಕೆ ಇರಿಸಿದರು. ನಿತ್ಯದ ಬಳಕೆಯಿಂದ ತೆರೆ ಮರೆಗೆ ಸರಿದಿದ್ದ ಗ್ರಾಮೀಣ ಸೊಗಡಿನ ಖಾದ್ಯಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ಶಾವಿ ಅನ್ನ, ನವಣೆ ಬಿಸಿಬೇಳೆ ಬಾತ್, ನವಣೆ ಪಲಾವ್, ಸಜ್ಜೆ ಜಿಲೇಬಿ, ಸಜ್ಜೆ ರೊಟ್ಟಿ, ರಾಗಿ ಹಾಲುಬಾಯಿ, ರಾಗಿ ಸ್ಮೂದಿ, ನವಣೆ ಟಿಕ್ಕಿ, ಸಜ್ಜೆ ಶಂಕರಪಾಳೆ, ಜೋಳದ ಕಡಬು, ರಾಗಿ ಉಂಡೆ, ರಾಗಿ ಗಂಜಿ, ರಾಗಿ ಮುದ್ದೆ, ರಾಗಿ ಲಡ್ಡು, ಸಜ್ಜೆ ನಿಪ್ಪಟ್ಟು, ನವಣಿ ಹುಗ್ಗಿ, ಗೋಧಿ ಹುಗ್ಗಿ, ರಾಗಿ ಮುದ್ದೆ ಮತ್ತು ಸಾಂಬರ್, ತಂಬಿಟ್ಟು, ನವಣೆ ಉಪ್ಪಿಟ್ಟು, ಸಜ್ಜೆ– ರಾಗಿ ಸಿಹಿ ಮತ್ತು ಖಾರಾಬಾತ್, ರಾಗಿ ಚಕ್ಲಿ, ಸಜ್ಜೆ ನಿಪ್ಪಟ್ಟು, ಸಿಹಿ ಬೊಂಡಾ ಸಾಂಪ್ರದಾಯಿಕ ಖಾದ್ಯ ಪ್ರಪಂಚವನ್ನು ತೆರೆದಿಟ್ಟವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರಡಿಯಾ, ‘ನಿತ್ಯದ ಊಟದಲ್ಲಿ ಹೆಚ್ಚು ರಾಸಾಯನಿಕ ಅಂಶ ಇರುವ ಪದಾರ್ಥಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಹಿಳೆಯರು ನಿತ್ಯದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ, ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ, ಸ್ಪರ್ಧೆಯ ತೀರ್ಪುಗಾರರಾಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಜಯಪ್ರಕಾಶ ನಾರಾಯಣ, ತೋಟಗಾರಿಕೆ ವಿಸ್ತಿರ್ಣ ಘಟಕದ ಸಹಾಯಕ ಪ್ರಾಧ್ಯಾಪಕಿ ಶಶಿಕಲಾ ರೂಳಿ, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಸ್ನೇಹಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮೂರು ವಿಭಾಗಗಳ ವಿಜೇತರು

ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಸ್ಪರ್ಧೆಯನ್ನು ಖಾರ ಸಿಹಿ ಹಾಗೂ ಮರೆತು ಹೋದ ಖಾದ್ಯಗಳ ಮೂರು ವಿಭಾಗಗಳಲ್ಲಿ ಆಯೋಜನೆ ಮಾಡಲಾಗಿದೆ. ಖಾರ ಖಾದ್ಯ: ಯಾದಗಿರಿಯ ಮನ್ಪ್ರೀತ್ ಪ್ರಥಮ ಸೈದಾಪುರದ ಅರ್ಚನಾ ಪಿ. ಸುರೇಶ ದ್ವಿತೀಯ ಮತ್ತು ಯಡಳ್ಳಿಬ ವಿಮಲಾ ಹೊಸಮನಿ ತೃತೀಯ ಸ್ಥಾನ ಪಡೆದೀಹ. ಸಿಹಿ ಖಾದ್ಯ: ಯಾದಗಿರಿಯ ನಿರೂಪಾ ಎಸ್.ಪಾಟೀಲ ಪ್ರಥಮ ಹತ್ತಿಗೂಡುರಿನ ಶೋಭಾ ದ್ವಿತೀಯ ಮತ್ತು ಸುರಪುರದ ಸರೋಜನಿ ಗುರುಲಿಂಗಪ್ಪ ತೃತೀಯ ಸ್ಥಾನ ಗಳಿಸಿದರು. ಮರೆತು ಹೋದ ಖಾದ್ಯ: ಮೈಲಾಪುರದ ಶರಣಮ್ಮ ಶರಣಪ್ಪ ಪ್ರಥಮ ಐಕೂರಿನ ರೇಷ್ಮಾ ಚಾಂದ್ ಪಾಷಾ ದ್ವಿತೀಯ ಮತ್ತು ಹತ್ತಿಗೂಡುರಿನ ಗಂಗಮ್ಮ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯ ವಿಜೇತರಿಗೆ ಕೃಷಿ ಇಲಾಖೆಯು ಪ್ರಥಮ ಸ್ಥಾನ ಪಡೆದವರಿಗೆ ₹ 5000 ದ್ವಿತೀಯ ಸ್ಥಾನ ಪಡೆದವರಿಗೆ ₹ 3000 ಹಾಗೂ ತೃತೀಯ ಸ್ಥಾನ ಪಡೆದವರಿಗೆ ₹ 2000 ನಗದು ಬಹುಮಾನ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.