ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಡೊಳ್ಳು ಕುಣಿತ ಮೂಲಕ ‘ಏಡ್ಸ್‌’ ಜಾಗೃತಿ

ಪ್ರತಿ ವರ್ಷ ಒಂದೊಂದು ತಾಲ್ಲೂಕಿನಲ್ಲಿ ಕಾರ್ಯಕ್ರಮ ಆಯೋಜನೆ
Last Updated 2 ಫೆಬ್ರುವರಿ 2022, 3:17 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್‌ಐವಿ, ಏಡ್ಸ್‌ ಕುರಿತು ಜಾಗೃತಿ ಮೂಡಿಸಲು ಡೊಳ್ಳು ಕುಣಿತ ಅಭಿಯಾನದ ಮೊರೆ ಹೋಗಿದ್ದಾರೆ.

ಬೆಳಗಾವಿಯ ಬೀರಸಿದ್ದೇಶ್ವರ ಜಾನಪದ ಕಲಾ ಸಂಘದಿಂದ ಶಹಾಪುರ, ವಡಗೇರಾ ತಾಲ್ಲೂಕಿನ ಆಯ್ದ 15 ಗ್ರಾಮಗಳಲ್ಲಿ ಜನವರಿ 31ರ ವರೆಗೆ ಏಡ್ಸ್‌ ಜಾಗೃತಿ ಮೂಡಿಸಲಾಗುತ್ತಿದೆ.

7ರಿಂದ 8 ಜನ ಕಲಾವಿದರು ತಮ್ಮದೇ ವಾಹನದಲ್ಲಿ ಗ್ರಾಮಗಳನ್ನು ಸುತ್ತಿ ಜನನಿಬಿಡ ಪ್ರದೇಶದಲ್ಲಿ ಹಾಡುಗಳ ಮೂಲಕ ಗಮನ ಸೆಳೆದಿದ್ದಾರೆ. ಡೊಳ್ಳು ಬಾರಿಸಿ ಜನರನ್ನು ಸೇರಿಸಿ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡುವ ಮೂಲಕ ಜನರ ಬಳಿಗೆ ತಲುಪಿದ್ದಾರೆ.

ದೇವಸ್ಥಾನ, ಬಯಲು ಪ್ರದೇಶ, ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸೇರಿ ಸಭೆಯ ಮೂಲಕ ಏಡ್ಸ್‌ ಹರಡದಂತೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿದ್ದಾರೆ.

ಎಚ್‌ಐವಿ ಯಾವರೀತಿಹರಡುತ್ತದೆ. ಸೋಂಕಿನ ಲಕ್ಷಣಗಳೇನಾದರೂ ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಕೇಂದ್ರದಲ್ಲಿ ಉಚಿತವಾಗಿ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜನರಿಗೆ ತಿಳಿ ಹೇಳಿದ್ದಾರೆ.

ಎಚ್‌ಐವಿ, ಏಡ್ಸ್ ಜಾಗೃತಿ ಆಂದೋಲನ: ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ವತಿಯಿಂದ ಜನವರಿ 21ರಿಂದ ಜನವರಿ 28ರ ವರೆಗೆ ಶಹಾಪುರ ತಾಲ್ಲೂಕಿನ ಪ್ರತಿ ಹಳ್ಳಿ ಮತ್ತು ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಎಚ್‌ಐವಿ, ಏಡ್ಸ್ ಕುರಿತು ಮಾಹಿತಿ ನೀಡುವುದರ ಜೊತೆಗೆ ಜಾಗೃತಿ ಆಂದೋಲನ ನಡೆಸಿದ್ದಾರೆ.

11 ಪ್ರಾಥಮಿಕ ಆರೋಗ್ಯ ಕೇಂದ್ರ, 1 ನಗರ ಆರೋಗ್ಯ ಕೇಂದ್ರ ಒಟ್ಟು 12 ಆರೋಗ್ಯ ಕೇಂದ್ರಗಳು, 295 ಆಶಾ ಕಾರ್ಯಕರ್ತೆಯರು, 30 ಜನ ಆರೋಗ್ಯ ಸಿಬ್ಬಂದಿ, 61,779 ಮನೆಗಳು, 2,86,784 ಜನರನ್ನು ಸಂಪರ್ಕಿಸಿದ್ದಾರೆ.
ಪ್ರತಿ ಮನೆಗೆ ತೆರಳಿದ ಆಶಾ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆಯ ಬಾಗಿಲಿಗೆ ಸಿಕ್ಟರ್‌ ಅಂಟಿಸಲಾಗಿದೆ. ಇದರಿಂದ ಏಡ್ಸ್‌ ಕುರಿತು ಜಾಗೃತಿ ವಹಿಸುವಂತೆ ಅರಿವು ಮೂಡಿಸಲಾಗಿದೆ.

ಯಾವ್ಯಾವ ಹಳ್ಳಿಗಳಲ್ಲಿ ಜಾಗೃತಿ: ವಡಗೇರಾ ತಾಲ್ಲೂಕಿನ ವಡಗೇರಾ, ಕುರಕುಂದ, ಹಾಲಗೇರಾ, ಗೆಡ್ಡೆಸೂಗೂರು, ಕೋನಳ್ಳಿ, ಕೆ ತಾಂಡಾ, ಬಿಳ್ಹಾರ, ಬೆಂಡೆಬೆಂಬಳಿ, ಕೋಡಾಲ, ತುಮಕೂರು, ಗೊಂದನೂರ, ಕೊಂಕಲ್‌, ಐಕೂರು, ಐಯಾಳ, ಶಹಾಪುರ ತಾಲ್ಲೂಕಿನ ‌ಶಿರವಾಳ ಗ್ರಾಮಗಳಲ್ಲಿ ಜಾನಪದ ಕಲಾತಂಡದ ಮೂಲಕ ಎಚ್‌ಐವಿ, ಏಡ್ಸ್ ಕುರಿತು ಜನ ಜಾಗೃತಿ ಹಮ್ಮಿಕೊಳ್ಳುವುದು ಸೇರಿದಂತೆ ಎಚ್‌ಐವಿ ಪರೀಕ್ಷೆ ಮತ್ತು ಆಪ್ತಸಮಾಲೋಚನೆ ನಡೆಸಲಾಗಿದೆ. ಕಲಾವಿದರು ಹಾಡುಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಶಹಾಪುರ ತಾಲ್ಲೂಕಿನಲ್ಲಿ 2020–21ನೇ ಸಾಲಿನಲ್ಲಿ 16,584 ಜನರ ಎಚ್‌ಐವಿ ಪರೀಕ್ಷೆಯ ಗುರಿ ಇದ್ದು, 6,925 ಜನರನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಪಾಸಿಟಿವಿಟಿ ದರ 0.22 ರಷ್ಟಿದೆ. 9,096 ಗರ್ಭಿಣಿಯರನ್ನು ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಪಾಸಿಟಿವಿಟಿ ದರ 0.06 ರಷ್ಟಿದೆ.

2021–22ನೇ ಸಾಲಿನಲ್ಲಿ 11,688 ಸಾಮಾನ್ಯ ಅರ್ಥಿಗಳ ಪರೀಕ್ಷೆ ಗುರಿ ಇದ್ದು, 10,606 ಪರೀಕ್ಷೆ ಮಾಡಲಾಗಿದೆ. ಪಾಸಿಟಿವಿಟಿ ದರ 0.32 ಇದೆ. 6,823 ಗರ್ಭಿಣಿಯರ ಎಚ್‌ಐವಿ ಪರೀಕ್ಷೆಯ ಗುರಿ ಇದ್ದು, 6,565 ಗರ್ಭಿಣಿಯರ ಪರೀಕ್ಷೆ ಕೈಗೊಳ್ಳಲಾಗಿದೆ. ಪಾಸಿಟಿವಿಟಿ ದರ 0.01 ರಷ್ಟಿದೆ.

***

ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಐಎಚ್‌ವಿ, ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸಿ ಮನೆಗೆ ಸ್ಟಿಕ್ಕರ್‌ ಅಂಟಿಸಿದ್ದಾರೆ.
-ಡಾ.ಲಕ್ಷ್ಮೀಕಾಂತ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT