ಕಕ್ಕೇರಾ: ಇಲ್ಲಿನ ಪೀರಾನಾಯ್ಕ್ ತಾಂಡಾದ ವ್ಯಾಪ್ತಿಯ ಅಂಬಾನಗರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಉಚಿತವಾಗಿ ನೀಡುವ ಪೌಷ್ಟಿಕ ಆಹಾರದ ಪಾಕೇಟ್ಗಳನ್ನು ಮಾರಾಟ ಮಾಡುವಾಗ ಗ್ರಾಮಸ್ಥರ ಕೈಗೆ ಅಂಗನವಾಡಿ ಶಿಕ್ಷಕಿ ಸಿಕ್ಕಿಹಾಕಿಕೊಂಡ ಘಟನೆ ಬುಧವಾರ ನಡೆದಿದೆ.

ಅಂಬಾನಗರದ ಅಂಗನವಾಡಿ ಕೇಂದ್ರಕ್ಕೆ ಕಳೆದ ತಿಂಗಳು ಆಮದು ಆಗಿದ್ದ ಮಕ್ಕಳ ಪೌಷ್ಟಿಕಾಂಶವುಳ್ಳ ಆಹಾರ ಪಾಕೇಟ್ಗಳನ್ನು ಮಕ್ಕಳಿಗೆ ವಿತರಿಸುವ ಬದಲು ಸಂಬಂಧಿಕರಿಗೆ ಹಾಗೂ ಇತರರಿಗೆ ಮಾರಾಟ ಮಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಸ್ಥಳಕ್ಕೆ ವಲಯ ಅಂಗನವಾಡಿ ಮೇಲ್ವಿಚಾರಕಿ ಶೋಭಾ ಸಜ್ಜನ್ ಭೇಟಿ ನೀಡಿ ಸಿಡಿಪಿಓ ಅವರಿಗೆ ಮಾಹಿತಿ ನೀಡಿದ್ದಾರೆ.

ಅಂಗನವಾಡಿ ಶಿಕ್ಷಕಿ ಶ್ರೀದೇವಿ ಅವರು ಮಕ್ಕಳ ಹಾಗೂ ಪಾಲಕರ ಜೊತೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಶಿಕ್ಷಕಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಅಖಂಡ ಕರ್ನಾಟಕ ರಕ್ಷಣಾ ಸೇನೆಯ ಅಂಬಾನಗರ ನಗರ ಅಧ್ಯಕ್ಷ ಶಿವರಾಜ.ಬಿ. ಗೋಡಿಹಾಳ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದರು. ಗುರುವಾರ ಬೆಳಿಗ್ಗೆ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು ಅಮಾನತ್ತಿಗೆ ಒತ್ತಾಯಿಸಿದರು.

ಗ್ರಾಮಸ್ಥರಾದ ಬಸವರಾಜ ಕಾರಲಕುಂಟಿ, ವೆಂಕಟೇಶ ಕಾರಲಕುಂಟಿ, ರಮೇಶ ಕಾರಲಕುಂಟಿ, ಯಂಕಪ್ಪ ಕಾರಲಕುಂಟಿ, ಭೀಮಣ್ಣ ಗೋಡಿಹಾಳ, ಬುಡ್ಡಯ್ಯ ಗೋಡಿಹಾಳ, ಸೋಮಣ್ಣ ಸತ್ಯ, ಶಾಂತಕುಮಾರ ಕುರಿ, ಹಣಮಂತ ಬೈಚಬಾಳ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.