‘ವಾರದಲ್ಲಿ 1400 ಮಕ್ಕಳ ತಪಾಸಣೆ’
‘ಆಗಸ್ಟ್ ತಿಂಗಳ ಆರಂಭದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಾರದಲ್ಲಿ ಸುಮಾರು 650 ಮಕ್ಕಳನ್ನು ತಪಾಸಣೆ ಮಾಡುತ್ತಿದ್ದೇವು. ವೈರಾಣು ಜ್ವರ ಹಬ್ಬಿದ ಬಳಿಕ ವಾರದಲ್ಲಿ ಸುಮಾರು 1400 ಮಕ್ಕಳ ತಪಾಸಣೆ ನಡೆಸಿದ್ದೇವೆ’ ಎಂದು ‘ಯಿಮ್ಸ್’ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಕುಮಾರ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಒಪಿಡಿಗಳನ್ನು ಹೆಚ್ಚಿಸಿದ್ದೇವೆ. ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆಕೊಡುವಂತಹ ಗಂಭೀರವಾದ ಪ್ರಕರಣಗಳು ಕಂಡುಬಂದಿಲ್ಲ. ಒಪಿಡಿಯಲ್ಲಿ ತಪಸಾಣೆ ಮಾಡಿ ಚಿಕಿತ್ಸೆ ಕೊಟ್ಟು ಕಳುಹಿಸಲಾಗಿದೆ. ಮಕ್ಕಳಲ್ಲಿನ ವೈರಾಣ ಜ್ವರದ ಪ್ರಮಾಣ ಇಳಿಕೆ ಆಗುತ್ತಿದೆ’ ಎಂದರು.