ಯಾದಗಿರಿ: ಗುರುಮಠಕಲ್ನ ಅಯ್ಯಪ್ಪ ನರೇಂದ್ರ ರಾಠೋಡ ಅವರ ಮಾಲೀಕತ್ವದ ಲಕ್ಷ್ಮಿ ತಿಮ್ಮಪ್ಪ ಕಾಟನ್ ಮತ್ತು ಜಿನ್ನಿಂಗ್ ಮಿಲ್ ಆವರಣದಲ್ಲಿ ಪತ್ತೆಯಾದ ಪಡಿತರ ಧಾನ್ಯ (ಅಕ್ಕಿ, ಜೋಳ) ಹಾಗೂ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಪ್ಯಾಕೆಟ್ಗಳ ಅಕ್ರಮ ದಾಸ್ತಾನು ಸಂಬಂಧಿತ ಮೂರು ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.

ಅಯ್ಯಪ್ಪ ಈಗಾಗಲೇ 3,985 ಕ್ವಿಂಟಲ್ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಸಿಐಡಿ ತನಿಖೆ ಎದುರಿಸುತ್ತಿದ್ದಾರೆ. ಈಗ ಮತ್ತೆ ಮೂರು ಪ್ರಕರಣಗಳು ಸೇರ್ಪಡೆಯಾಗಿವೆ.

ಹತ್ತಿ ಮಿಲ್ ಗೋದಾಮಿನಲ್ಲಿ ₹ 43.79 ಲಕ್ಷ ಮೌಲ್ಯದ ಪಡಿತರ ಧಾನ್ಯ ಹಾಗೂ ವೇ ಬ್ರಿಡ್ಜ್ (ತೂಕದ ಸೇತುವೆ) ಕೋಣೆಯಲ್ಲಿ ₹ 75,757 ಹಾಗೂ ₹ 32,760 ಮೌಲ್ಯದ ಕ್ಷೀರ ಭಾಗ್ಯದ ಹಾಲಿನ ಪುಡಿ ಪ್ಯಾಕೆಟ್ಗಳನ್ನು ಇರಿಸಲಾಗಿತ್ತು. ಈ ಬಗ್ಗೆ ಗುರುಮಠಕಲ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದ್ದವು. ಈ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.

‘ಠಾಣೆಯ ಅಪರಾಧ ಸಂಖ್ಯೆ 188/2025, 189/2025 ಹಾಗೂ 190/2025 (ಪಡಿತರ ಧಾನ್ಯ ಹಾಗೂ ಹಾಲಿನ ಪುಡಿ ಅಕ್ರಮ ದಾಸ್ತಾನು) ಪ್ರಕರಣಗಳನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ. ಮುಂದಿನ ತನಿಖೆಗೆ ಪ್ರಕರಣದ ಕಡತಗಳನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು’ ಎಂದು ಐಜಿಪಿ ಪಿ.ಹರಿಶೇಖರನ್ ಅವರು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.