ಸೋಮವಾರ, ಅಕ್ಟೋಬರ್ 3, 2022
25 °C

ಉದ್ಯೋಗ: 312 ಹೆಡ್‌ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಅರ್ಜಿ ಕರೆದ ಬಿಎಸ್‌ಎಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಗಡಿ ಭದ್ರತೆ ಪಡೆಯಲ್ಲಿ312 ಹೆಡ್‌ ಕಾನ್‌ಸ್ಟೆಬಲ್‌ ಹಾಗೂ 11 ಎಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಆರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹುದ್ದೆಗಳ ಮಾಹಿತಿ, ಅರ್ಜಿ ಸಲ್ಲಿಕೆ ವಿಧಾನ, ನೇಮಕಾತಿ ಪ್ರಕ್ರಿಯೆಯ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವೆಬ್‌ಸೈಟ್‌ನಿಂದ ಮಾಹಿತಿ ಪಡೆಯಬಹುದು.

ಹುದ್ದೆಯ ಹೆಸರು : 1) ಎಎಸ್‌ಐ (ಸ್ಟೆನೊ); ಹುದ್ದೆಗಳ ಸಂಖ್ಯೆ: 11

2) ಹೆಡ್‌ ಕಾನ್‌ಸ್ಟೆಬಲ್‌; ಹುದ್ದೆಗಳ ಸಂಖ್ಯೆ: 312

ವಿದ್ಯಾರ್ಹತೆ: ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ ದ್ವಿತೀಯ ಪಿಯುಸಿಯಲ್ಲಿ(10+2) ಉತ್ತೀರ್ಣರಾಗಿರಬೇಕು. ಎಎಸ್‌ಐ ಹುದ್ದೆಗಳಿಗೆ ಟೈಪಿಂಗ್‌ ಹಾಗೂ ಸ್ಟನೊ ಡಿಪ್ಲೊಮಾ ಪಡೆದಿರಬೇಕು.

ವೇತನ: ಮಾಸಿಕ ₹25,700 - ₹81,100 ರವರೆಗೆ (ವಿವಿಧ ಭತ್ಯೆಗಳು ಸೇರಿ)

ವಯೋಮಿತಿ : ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಕೊನೆ : ಸೆಪ್ಟೆಂಬರ್ 6. 2022

ವೆಬ್‌ಸೈಟ್‌: https://rectt.bsf.gov.in/

ಅಧಿಸೂಚನೆ: shorturl.at/BOQU7

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು