ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಬಿಪಿಯಲ್ಲಿ 458 ಕಾನ್‌ಸ್ಟೆಬಲ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಜೂನ್ 27 ಕ್ಕೆ ಆರಂಭ
Published 24 ಜೂನ್ 2023, 13:51 IST
Last Updated 24 ಜೂನ್ 2023, 13:51 IST
ಅಕ್ಷರ ಗಾತ್ರ

ಬೆಂಗಳೂರು: ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯಲ್ಲಿ (ಐಟಿಬಿಪಿ) ಖಾಲಿ ಇರುವ ‘ಕಾನ್‌ಸ್ಟೆಬಲ್ ಡ್ರೈವರ್’ 458 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್ ಅರ್ಜಿ ಸಲ್ಲಿಕೆ ಜೂನ್ 27 ಕ್ಕೆ ಆರಂಭವಾಗಿ ಜುಲೈ 26ಕ್ಕೆ ಅಂತ್ಯವಾಗಲಿದೆ. www.recruitment.itbppolice.nic.in ವೆಬ್‌ಸೈಟ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.

10 ನೇ ತರಗತಿ ಪಾಸ್ ಆಗಿರುವ, ಕಡ್ಡಾಯವಾಗಿ ಹೆವಿ ವೆಹಿಕಲ್ ಡ್ರೈವಿಂಗ್ ಲೈಸನ್ಸ್ (ಬೃಹತ್ ವಾಹನ ಚಾಲನಾ ಪರವಾನಗಿ) ಹೊಂದಿರುವ, 21 ರಿಂದ 27 ವರ್ಷ ವಯಸ್ಸಿನೊಳಗಿನ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯು ನಾಲ್ಕು ಹಂತಗಳಲ್ಲಿ ಅಂದರೆ ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ನಡೆಯುತ್ತದೆ.

ಈ ಕುರಿತು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಐಟಿಬಿಪಿಯ ಅಧಿಕೃತ ವೆಬ್‌ಸೈಟ್ ಪರಿಶೀಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT