ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 20 ಜುಲೈ 2021, 19:30 IST
ಅಕ್ಷರ ಗಾತ್ರ

ಭಾಗ– 27

362. ಮಾಗೋಡು ಜಲಪಾತದ ಉಗಮವಾಗಿದ್ದು ಯಾವ ನದಿಯಿಂದ

ಎ) ಶರಾವತಿ

ಬಿ) ಕಾಳಿ

ಸಿ) ಬೇಡ್ತಿ

ಡಿ) ಕಾವೇರಿ

363. ಈ ಕೆಳಗಿನವುಗಳಲ್ಲಿ ಜಾಗತಿಕ ತಾಪಮಾನಕ್ಕೆ ಕಾರಣ ಯಾವುದು?

ಎ) ಮಿಥೇನ್

ಬಿ) ಕಾರ್ಬನ್ ಡೈ ಆಕ್ಸೈಡ್

ಸಿ) ವಾಟರ್ ವೇಪರ್

ಡಿ) ಈ ಮೇಲಿನ ಎಲ್ಲವೂ

364. ಈ ಕೆಳಗಿನವರಲ್ಲಿ ಮೊಟ್ಟಮೊದಲ ಬಾರಿ ಯಾವ ಭಾರತೀಯ ಬ್ರಿಟಿಷ್ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದರು?

ಎ) ಆರ್.ಸಿ. ದತ್ತ

ಬಿ) ದಾದಾಬಾಯಿ ನವರೋಜಿ

ಸಿ) ರಾಮ್ ಮೋಹನ್ ರಾಯ್

ಡಿ) ಮೇಘಾನಂದ ದೇಸಾಯಿ

365. ಮೌರ್ಯರ ಕಾಲದಲ್ಲಿ ತೆರಿಗೆ ವಂಚನೆಗೆ ಯಾವ ಶಿಕ್ಷೆ ವಿಧಿಸಲಾಗುತ್ತಿತ್ತು?

ಎ) ಮರಣದಂಡನೆ

ಬಿ) ವಸ್ತುಗಳ ಮುಟ್ಟುಗೋಲು

ಸಿ) ಜೈಲು

ಡಿ) ಗಡಿಪಾರು

366. ಯಾವ ಮೊಘಲ್ ಚಕ್ರವರ್ತಿಯು ತಂಬಾಕು ಸೇವನೆಯನ್ನು ನಿಷೇಧಿಸಿದ್ದರು?

ಎ) ಬಾಬರ್

ಬಿ) ಜಹಾಂಗೀರ್

ಸಿ) ಔರಂಗಜೇಬ್

ಡಿ) ಮೊಹಮ್ಮದ್ ಷಾ

367. ‘ಪಂಜಾಬ್ ಕೇಸರಿ’ ಎಂದು ಯಾರನ್ನು ಕರೆಯಲಾಗುತ್ತದೆ?

ಎ) ಭಗತ್ ಸಿಂಗ್

ಬಿ) ಲಾಲಾ ಲಜಪತ್ ರಾಯ್

ಸಿ) ರಾಜ ಗುರು

ಡಿ) ಸುಖದೇವ್

368. ಹೊಯ್ಸಳರ ರಾಜಧಾನಿ ಯಾವುದು?

ಎ) ಹಲ್ಮಿಡಿ

ಬಿ) ಬೊಮ್ಮಸಂದ್ರ

ಸಿ) ದ್ವಾರಸಮುದ್ರ

ಡಿ) ಶಿವನಸಮುದ್ರ

369. ಈ ಕೆಳಗಿನವರಲ್ಲಿ ಇತ್ತೀಚೆಗೆ ರಾಷ್ಟ್ರಕವಿ ಪುರಸ್ಕಾರಕ್ಕೆ ಆಯ್ಕೆಯಾದವರು ಯಾರು?

ಎ) ದೇವನೂರು ಮಹಾದೇವ

ಬಿ) ಕೆ.ಎಸ್.ನಿಸಾರ್ ಅಹಮದ್

ಸಿ) ಚಂಪಾ

ಡಿ) ಎಸ್.ಎಲ್.ಭೈರಪ್ಪ

370. ‘ಮಾನವ ಜನ್ಮ ಬಲು ದೊಡ್ಡದು’ ಎಂದು ಪ್ರತಿಪಾದಿಸಿದವರು ಯಾರು?

ಎ) ಕನಕದಾಸ

ಬಿ) ಸೂರದಾಸ

ಸಿ) ಪುರಂದರದಾಸ

ಡಿ) ರಾಮದಾಸ

371. ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು

ಎ) ಇ.ಪಿ. ರೈಸ್

ಬಿ) ಎಡ್ವರ್ಡ್ ರೈಸ್

ಸಿ) ಕಿಟೆಲ್

ಡಿ) ಬಿ.ಎಲ್.ರೈಸ್

372. ಕರ್ನಾಟಕದ ಉನ್ನತ ಶಿಕ್ಷಣ ಸಚಿವರು ಯಾರು?

ಎ) ಲಕ್ಷ್ಮಣ ಸವದಿ

ಬಿ) ರಾಮಲಿಂಗ ರೆಡ್ಡಿ

ಸಿ) ಡಾ.ಸಿ.ಎನ್‌. ಅಶ್ವತ್ಥನಾರಾಯಣ

ಡಿ) ಬಸವರಾಜ ರಾಯರೆಡ್ಡಿ

373. ಕರ್ನಾಟಕದ ಅತೀ ಹಳೆಯ ಅಣೆಕಟ್ಟು ಯಾವುದು?

ಎ) ಕೃಷ್ಣರಾಜ ಸಾಗರ

ಬಿ) ವಾಣಿವಿಲಾಸ

ಸಿ) ತುಂಗಭದ್ರಾ

ಡಿ) ಹಿಪ್ಪರಗಿ ಬ್ಯಾರೇಜ್

374. ‘ಮೆಕ್ ಮೋಹನ್’ ಗಡಿ ಯಾವ ದೇಶಗಳ ಮಧ್ಯೆ ಇದೆ?

ಎ) ಭಾರತ-ಪಾಕಿಸ್ತಾನ

ಬಿ) ಭಾರತ–ಚೀನಾ

ಸಿ) ಅಫ್ಘಾನಿಸ್ತಾನ-ಪಾಕಿಸ್ತಾನ

ಡಿ) ಭಾರತ-ಬಾಂಗ್ಲಾದೇಶ‌

375. ದ್ರವದ ನಾಲ್ಕನೆಯ ಹಂತ

ಎ) ಆವಿ

ಬಿ) ಅನಿಲ

ಸಿ) ಪ್ಲಾಸ್ಮಾ

ಡಿ) ಅರೆಘನ

ಭಾಗ 26ರ ಉತ್ತರ

351. ಸಿ, 352. ಬಿ, 353. ಡಿ, 354. ಸಿ, 355. ಬಿ, 356. ಬಿ, 357. ಸಿ, 358. ಬಿ, 359. ಎ, 360. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT