ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC, KPSC ಬಹುಆಯ್ಕೆಯ ಪ್ರಶ್ನೆಗಳು

Published 29 ಮೇ 2024, 23:53 IST
Last Updated 29 ಮೇ 2024, 23:53 IST
ಅಕ್ಷರ ಗಾತ್ರ

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ..

1.  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

 ಎ. ಈ ನಿಗಮವನ್ನು 1987ರಲ್ಲಿ ಕಂಪನಿ ಅಧಿನಿಯಮ 1956ರ ಅಡಿಯಲ್ಲಿ ಸ್ಥಾಪಿಸಲಾಗಿದೆ.

 ಬಿ. ಈ ನಿಗಮವು ಸಮಾಜದ ದುರ್ಬಲ, ಶೋಷಿತ ಮತ್ತು ಅಸಹಾಯಕ ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢಗೊಳಿಸುವ ಉದ್ದೇಶವನ್ನು ಹೊಂದಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

 ಎ. ಹೇಳಿಕೆ ಎ ಸರಿಯಾಗಿದೆ.

 ಬಿ. ಹೇಳಿಕೆ ಬಿ ಸರಿಯಾಗಿದೆ.

 ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

 ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

 ಉತ್ತರ : ಡಿ

2. ಉದ್ಯೋಗಿನಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

 ಎ. ಈ ಯೋಜನೆಯಡಿ ಎಲ್ಲಾ ವರ್ಗದ ಮಹಿಳೆಯರಿಗೆ ವಯೋಮಿತಿ 18 ರಿಂದ 55 ವರ್ಷ ಆಗಿದೆ.

 ಬಿ. ಮಹಿಳೆಯರು ಹೆಚ್ಚಿನ ಆದಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಖಾಸಗಿ ಆರ್ಥಿಕ ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಹೆಚ್ಚಿನ ಬಡ್ಡಿ ನೀಡುವುದನ್ನು ತಪ್ಪಿಸುವುದು ಉದ್ಯೋಗಿನಿ ಯೋಜನೆಯ ಉದ್ದೇಶವಾಗಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

 ಎ. ಹೇಳಿಕೆ ಎ ಸರಿಯಾಗಿದೆ.

 ಬಿ. ಹೇಳಿಕೆ ಬಿ ಸರಿಯಾಗಿದೆ.

 ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

 ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

 ಉತ್ತರ: ಡಿ

3.  ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

 ಎ. ಕರ್ನಾಟಕವು ರಾಜ್ಯ ಲಿಂಗತ್ವ ಅಲ್ಪಸಂಖ್ಯಾತರ ನೀತಿಯನ್ನು 2017ರಲ್ಲಿ ಜಾರಿಗೊಳಿಸಿದೆ.

 ಬಿ. ಕರ್ನಾಟಕವು ಸರ್ಕಾರಿ ಸೇವೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಉದ್ಯೋಗವಕಾಶ ಒದಗಿಸಲು ಸರ್ಕಾರವು ಎಲ್ಲಾ ವರ್ಗಗಳ ನೇರ ನೇಮಕಾತಿಯಲ್ಲಿ ಶೇ 2ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ.

ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.

 ಎ. ಹೇಳಿಕೆ ಎ ಸರಿಯಾಗಿದೆ.

 ಬಿ. ಹೇಳಿಕೆ ಬಿ ಸರಿಯಾಗಿದೆ.

 ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

 ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.

 ಉತ್ತರ : ಎ

4. ಅಮರಾವತಿ ಸ್ತೂಪಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

 ಎ. ಆಂಧ್ರದ ಅಮರಾವತಿ ಸ್ತೂಪ ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡದಾಗಿದೆ.

 ಬಿ. ಈ ಸ್ತೂಪದ ಮೇಲೆ ಬುದ್ಧ ಮತ್ತು ಬೋಧಿಸತ್ವರ ಶಿಲ್ಪಗಳನ್ನು ದಿವ್ಯಪುರುಷರಂತೆ ಕೆತ್ತಲಾಗಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

 ಎ. ಹೇಳಿಕೆ ಎ ಸರಿಯಾಗಿದೆ.

 ಬಿ. ಹೇಳಿಕೆ ಬಿ ಸರಿಯಾಗಿದೆ.

 ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

 ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

 ಉತ್ತರ: ಡಿ

5. ಚೈತ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

 ಎ. ಬುದ್ಧನನ್ನು ಪೂಜಿಸುವ ಪ್ರಾರ್ಥನಾ ಸಭಾಂಗಣಗಳನ್ನು ಚೈತ್ಯಗಳೆಂದು ಕರೆಯುತ್ತಾರೆ.

 ಬಿ. ಅಜಂತ, ಕನ್ಹೇರಿ, ಜುನ್ನಾರ್, ಬೇಡ್ಸ, ಕಾಲೆ೯, ನಾಸಿಕ್ ಮತ್ತು ಕೊಂಡಾನೆಗಳಲ್ಲಿ ಶಾತವಾಹನರು ನಿರ್ಮಿಸಿದ ಚೈತ್ಯಗಳು ಕಂಡು ಬರುತ್ತವೆ.

ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.

 ಎ. ಹೇಳಿಕೆ ಎ ಸರಿಯಾಗಿದೆ.

 ಬಿ. ಹೇಳಿಕೆ ಬಿ ಸರಿಯಾಗಿದೆ.

 ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

 ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

 ಉತ್ತರ: ಡಿ

6. ವಿಹಾರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

 ಎ. ಬೌದ್ಧ ಭಿಕ್ಷುಗಳ ವಾಸಸ್ಥಾನಗಳೇ ವಿಹಾರಗಳಾಗಿವೆ.

 ಬಿ. ನಾಸಿಕ್‌ನಲ್ಲಿ 33 ವಿಹಾರಗಳಿವೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

 ಎ. ಹೇಳಿಕೆ ಎ ಸರಿಯಾಗಿದೆ.

 ಬಿ. ಹೇಳಿಕೆ ಬಿ ಸರಿಯಾಗಿದೆ.

 ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

 ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

 ಉತ್ತರ : ಎ

7. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

 ಎ. ಕರ್ನಾಟಕ ಸರ್ಕಾರವು 1992 ರಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿತು.

 ಬಿ. ಇದು ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.

ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.

 ಎ. ಹೇಳಿಕೆ ಎ ಸರಿಯಾಗಿದೆ.

 ಬಿ. ಹೇಳಿಕೆ ಬಿ ಸರಿಯಾಗಿದೆ.

 ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

 ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

 ಉತ್ತರ : ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT