ಕೇಂ ದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಕೃತಕ ಬುದ್ಧಿಮತ್ತೆ (ಎಐ) ಮತ್ತು ರೋಬೋಟಿಕ್ಸ್ ತಂತ್ರಜ್ಞಾನ ಉದ್ಯಾನ (ARTPARK) ಸಂಸ್ಥೆ ಪ್ರಾರಂಭಿಸಿದೆ. ಆರೋಗ್ಯ, ಶಿಕ್ಷಣ, ಸಂಚಾರ, ಮೂಲಸೌಕರ್ಯಗಳು, ಕೃಷಿ, ಚಿಲ್ಲರೆ ವ್ಯಾಪಾರ, ಸೈಬರ್ ಅಪರಾಧದಂತಹ ವಲಯಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ನೂತನ ಸಂಶೋಧನಾ ಕಾರ್ಯಗಳನ್ನು ಉತ್ತೇಜಿಸಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್) ಆವರಣದಲ್ಲಿ ಈ ಆರ್ಟ್‌ಪಾರ್ಕ್ (ARTPARK- Artificial Intelligence and Robotics Technology Park) ಸ್ಥಾಪಿಸಲಾಗಿದ್ದು, ಇದು ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ ಮಾಡೆಲ್) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.

l ಪ್ರಾಥಮಿಕ ಹಂತದ ಹೂಡಿಕೆಯಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಕೃತಕ ಬುದ್ಧಿಮತ್ತೆ ಮತ್ತು ರೊಬೋಟಿಕ್ ತಂತ್ರಜ್ಞಾನ ವಲಯದ ಸಂಶೋಧನಾ ಚಟುವಟಿಕೆಗಳಿಗೆ ₹170 ಕೋಟಿ ಹಣ ಮೀಸಲಿಟ್ಟಿದೆ.

l ಪ್ರಸ್ತುತ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ‘ನ್ಯಾಷನಲ್ ಮಿಷನ್ ಆನ್ ಇಂಟರ್ ಡಿಸಿಪ್ಲಿನರಿ ಸೈಬರ್ ಫಿಸಿಕಲ್ ಸಿಸ್ಟಮ್ಸ್‘(National Mission on Interdisciplinary Cyber Physical Systems- NM-ICPS) ಎನ್ನುವ ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ ಕೈಗಾರಿಕಾ ವಲಯದ ಪರಿಣತರು, ಶಿಕ್ಷಣ ವಲಯದ ಪರಿಣತರು ಮತ್ತು ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಣತರು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಯೋಜನೆ ರೂಪಿಸಲಾಗಿದೆ.

l ಈ ಆರ್ಟ್‌ಪಾರ್ಕ್‌ನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ ಸೌಲಭ್ಯ ಅಭಿವೃದ್ಧಿಪಡಿಸುವುದಲ್ಲದೆ, ಎಐ–ರೊಬೊಟಿಕ್ ತಂತ್ರಜ್ಞಾನ ವಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತ್ತು ನೂತನ ಕೌಶಲಗಳ ತರಬೇತಿಯನ್ನೂ ಕಲ್ಪಿಸುತ್ತದೆ.

l ಈಗಾಗಲೇ ಈ ಸಂಸ್ಥೆಯು ‘ಭಾಷಾ ಸೇತು’ ಎನ್ನುವ ಕೃತಕ ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯಲ್ಲಿ ಭಾರತದ ಯಾವುದೇ ಭಾಷೆಯನ್ನು ಲಿಪಿಯ ಸ್ವರೂಪಕ್ಕೆ ಪರಿವರ್ತಿಸಬಹುದಾಗಿದೆ. ಭಾಷಾ ಸೇತು ಸೇವೆಯ ಪ್ರಮುಖ ಉದ್ದೇಶವೇನೆಂದರೆ ಭಾಷೆಯ ಅಡೆತಡೆಯಿಲ್ಲದೆ ಭಾರತದ ಎಲ್ಲಾ ಪ್ರಜೆಗಳು ಸಮನಾಂತರವಾಗಿ ಆರ್ಥಿಕ ಪ್ರಗತಿಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ವೇದಿಕೆ ಕಲ್ಪಿಸಲಾಗಿದೆ.

l ಪ್ರಸ್ತುತ ವರ್ಷ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ ತಂತ್ರಜ್ಞಾನ ಉದ್ಯಾನ, ‘ಸಂಪರ್ಕವಿಲ್ಲದವರಿಗೆ ಸಂಪರ್ಕ ಕಲ್ಪಿಸುವುದು’ (Connecting the Unconnected) ಎನ್ನುವ ಧ್ಯೇಯ ವಾಕ್ಯದ ಅಡಿಯಲ್ಲಿ ಸೃಜನಶೀಲ ಸಮಾವೇಶ ಆಯೋಜಿಸಿತ್ತು. ಈ ಸಮಾವೇಶದಲ್ಲಿ ಸೃಜನಶೀಲ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.