ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ನೀಡುವ ಒಂದು ಅವಕಾಶ ಇದಾಗಿದೆ. ಪೋಷಕರ ಏಕೈಕ ಹೆಣ್ಣುಮಗುವಾಗಿದ್ದು, ಸಿಬಿಎಸ್ಇ ಸಂಯೋಜಿತ ಶಾಲೆಯಿಂದ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಈ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ.

ಅರ್ಹತೆ: ವಿದ್ಯಾರ್ಥಿನಿಯು ಸಿಬಿಎಸ್ಇ ಸಂಯೋಜಿತ ಶಾಲೆಯಲ್ಲಿ 11 ಅಥವಾ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಅಲ್ಲಿ ಬೋಧನಾ ಶುಲ್ಕ ತಿಂಗಳಿಗೆ ₹ 3,000ಕ್ಕಿಂತ ಹೆಚ್ಚಿಲ್ಲ. ಅರ್ಜಿದಾರರು 10ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಐದು ವಿಷಯಗಳಲ್ಲಿ ಶೇ 70 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.

ಆರ್ಥಿಕ ನೆರವು: ಗರಿಷ್ಠ 2 ವರ್ಷಗಳ ಅವಧಿಗೆ ತಿಂಗಳಿಗೆ ₹ 1,000.
ಅರ್ಜಿ ಸಲ್ಲಿಸಲು ಕೊನೇ ದಿನ: 23-10-2025
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್

ಹೆಚ್ಚಿನ ಮಾಹಿತಿಗೆ: Short Url: www.b4s.in/praja/CMSC2

ಒಎನ್ಜಿಸಿ ಕ್ರೀಡಾ ವಿದ್ಯಾರ್ಥಿವೇತನ

ಭಾರತೀಯ ಕ್ರೀಡಾಪಟುಗಳಲ್ಲಿ ಕ್ರೀಡಾಸ್ಫೂರ್ತಿಯನ್ನು ಉತ್ತೇಜಿಸಲು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್ಜಿಸಿ) ಉಪಕ್ರಮ ಇದಾಗಿದೆ. ನಿಗಮದ ಅಧಿಕೃತ ವೆಬ್ಸೈಟ್ನಲ್ಲಿ ಪಟ್ಟಿ ಮಾಡಿರುವ, ಮಾನ್ಯತೆ ಪಡೆದ 21 ಕ್ರೀಡೆಗಳ ಪೈಕಿ ಒಂದರಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಿರುವ 15ರಿಂದ 20 ವರ್ಷ ವಯಸ್ಸಿನ ಪುರುಷ ಅಥವಾ ಮಹಿಳಾ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಅವರ ಪೋಷಕರ ವಾರ್ಷಿಕ ಆದಾಯ ₹ 5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ಸಹಾಯ: ಭಾಗವಹಿಸುವಿಕೆಯ ಮಟ್ಟವನ್ನು ಅವಲಂಬಿಸಿ ಮಾಸಿಕ ₹ 15,000ದಿಂದ ₹ 30,000ದವರೆಗೆ.

ಅರ್ಜಿ ಸಲ್ಲಿಸಲು ಕೊನೇ ದಿನ: 21-10-2025
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್

ಹೆಚ್ಚಿನ ಮಾಹಿತಿಗೆ: Short Url: www.b4s.in/praja/ONGC3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.