ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Casting couch | ಕಹಿ ಘಟನೆಯೊಂದನ್ನು ಹೇಳಿದ ನಟಿ ಇಶಾ ಗುಪ್ತಾ

ಕಾಸ್ಟಿಂಗ್ ಕೌಚ್ ಕಹಿ ನೆನಪನ್ನು ಬಿಚ್ಚಿಟ್ಟ ಜನ್ನತ್–2 ಖ್ಯಾತಿಯ ನಟಿ
Published 30 ಸೆಪ್ಟೆಂಬರ್ 2023, 10:10 IST
Last Updated 30 ಸೆಪ್ಟೆಂಬರ್ 2023, 10:10 IST
ಅಕ್ಷರ ಗಾತ್ರ

ಬೆಂಗಳೂರು: ಜನ್ನತ್– 2 ಖ್ಯಾತಿಯ ನಟಿ, ಮಾಡೆಲ್ ಇಶಾ ಗುಪ್ತಾ ತಮ್ಮ ಬೋಲ್ಡ್ ಅಭಿನಯ ಹಾಗೂ ಲುಕ್‌ನಿಂದ ಹೆಚ್ಚು ಸದ್ದು ಮಾಡಿದವರು.

ಈ ಹಿಂದೆ ಕಂಗನಾ ರಣಾವತ್, ಸ್ವರಾ ಭಾಸ್ಕರ್, ರಾಧಿಕಾ ಆಪ್ಟೆ ಸೇರಿದಂತೆ ಅನೇಕ ನಟಿಯರು ಬಾಲಿವುಡ್‌ನಲ್ಲಿ ತಾವು ಎದುರಿಸಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತನಾಡಿ, ಚಿತ್ರರಂಗದಲ್ಲಿನ ಕರಾಳ ಮುಖಗಳನ್ನು ಬಯಲಿಗೆಳದಿದ್ದರು.

ಇದೇ ರೀತಿ ಇಶಾ ಗುಪ್ತಾ ಕೂಡ ತಮಗೆ ಎದುರಾಗಿದ್ದ ಕಾಸ್ಟಿಂಗ್ ಕೌಚ್ ಅನುಭವವನ್ನು ಹೇಳಿಕೊಂಡಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿರುವ ಇಶಾ, ಚಿತ್ರವೊಂದರಲ್ಲಿ ನಟಿಸಲು ನನಗೆ ಆಫರ್ ಬಂದಿತ್ತು. ಆ ಚಿತ್ರ ಅದಾಗಲೇ ಅರ್ಧ ಚಿತ್ರೀಕರಣ ಮುಗಿಸಿತ್ತು. ಅವರ ನನ್ನನ್ನು ಕರೆಸಿದ್ದ ಉದ್ದೇಶ ಬೇರೆಯದ್ದೇ ಇತ್ತು. ಲೈಂಗಿಕತೆ ಬಗೆಗಿನ ಚಿತ್ರ ಅದಾಗಿದ್ದರಿಂದ ಅದರಿಂದ ನಾನು ಹಿಂದೆ ಸರಿದೆ. ಆ ನಂತರ ನನಗೆ ಸಿನಿಮಾಗಳಲ್ಲಿ ಹೆಚ್ಚು ಅವಕಾಶಗಳು ಬಂದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇನ್ನೊಂದು ಕಹಿ ಘಟನೆಯನ್ನು ಹೇಳಿಕೊಂಡಿರುವ ಅವರು, ಚಿತ್ರವೊಂದರ ಹೊರಾಂಗಣ ಚಿತ್ರೀಕರಣದಲ್ಲಿದ್ದಾಗ ನಿರ್ಮಾಪಕರ ಕಡೆಯವರು ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಗಳು ನನ್ನನ್ನು ಕಾಸ್ಟಿಂಗ್ ಕೌಚ್ ಬಲೆಗೆ ಕೆಡವಿದ್ದರು. ಆ ರಾತ್ರಿ ನನ್ನನ್ನು ಕೋಣೆಯಲ್ಲಿ ಒಬ್ಬಳೇ ಉಳಿದುಕೊಳ್ಳಲು ಹೇಳಿದ್ದರು. ಆದರೆ, ನಾನು ನನ್ನ ಕೋಣೆಯಲ್ಲಿ ಮಲಗಲು ನನ್ನ ಮೇಕಪ್ ಕಲಾವಿದನನ್ನು ಕರೆದಿದ್ದೆ. ನನಗೆ ರಕ್ಷಣೆ ಸಿಕ್ಕಿದ್ದರಿಂದ ಅವರ ಆಸೆ ಈಡೇರಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇಶಾ ಗುಪ್ತಾ ಅವರ 'ಒನ್ ಡೇ ಜಸ್ಟಿಸ್ ಡಿಲೇವರ್ಡ್‌' ಎಂಬ ಸಿನಿಮಾ ಇತ್ತೀಚೆಗೆ ತೆರೆ ಕಂಡಿತ್ತು. ಅವರ ಕೈಯಲ್ಲಿ ಇದೀಗ ಸಾಲು ಸಾಲು ಚಿತ್ರಗಳಿದ್ದು, ‘ಫೈಲ್ ನಂಬರ್ 323’, ‘ದೇಶಿ ಮ್ಯಾಜಿಕ್’, ‘ಹೇರಾ ಪೇರಿ–3’ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT