ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಸಾಮರ್ಥ್ಯಕ್ಕೆ ಮಾದರಿ ಪ್ರಶ್ನೋತ್ತರ ಇಲ್ಲಿದೆ

Last Updated 25 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

ಎಫ್‌ಡಿಎ–ಎಸ್‌ಡಿಎ, ಕೆಎಎಸ್‌–ಐಎಎಸ್‌ ಪೂರ್ವಭಾವಿ ‍ಪರೀಕ್ಷೆ, ಸ್ಟಾಫ್‌ ಸೆಲೆಕ್ಷನ್ ಕಮಿಷನ್ ಹಾಗೂ ರೈಲ್ವೆ, ಬ್ಯಾಂಕಿಂಗ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಮಾನಸಿಕಸಾಮರ್ಥ್ಯ(ಮೆಂಟಲ್ ಎಬಿಲಿಟಿ)ಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಅದರೊಂದಿಗೆ ಜಂಬಲ್‌ ಪದ, ವಾಕ್ಯ ಹಾಗೂ ಚಿತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ. ಹಾಗಾದರೆ ಜಂಬಲ್ ಪದ, ವಾಕ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹೇಗಿರುತ್ತವೆ?

ಕೆಪಿಎಸ್‌ಸಿ ಈ ಹಿಂದೆ ನಡೆಸಿದ ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಯಲ್ಲಿ ಈ ಕೆಳಗಿನ ರೀತಿಯ ಪ್ರಶ್ನೆಗಳನ್ನು ಸಾಮಾನ್ಯ ಕನ್ನಡ ಪತ್ರಿಕೆಯಲ್ಲಿ ಕೇಳಲಾಗಿತ್ತು. ಅವುಗಳನ್ನೊಮ್ಮೆ ಗಮನಿಸೋಣ. (ಸದ್ಯದಲ್ಲಿಯೇ ಅಂದರೆ ಬರುವ ಸೆಪ್ಟೆಂಬರ್ 18 ರಂದು ಕಡ್ಡಾಯ ಭಾಷಾ ಕನ್ನಡ ಪತ್ರಿಕೆ ನಡೆಯಲಿದೆ). ಹೀಗಾಗಿ ಈ ತರಹದ ಪ್ರಶ್ನೆಗಳತ್ತ ಗಮನ ಹರಿಸುವುದು ಉತ್ತಮ.

ಸೂಚನೆ:- ಮುಂದಿನ ವಾಕ್ಯಗಳು ಕ್ರಮಬದ್ಧವಾಗಿಲ್ಲ, ಅರ್ಥವುಂಟಾಗುವಂತೆ ಗೆರೆ ಹಾಕಿ ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ, ಅವುಗಳ ಅನುಕ್ರಮವನ್ನು ಗುರುತು ಹಾಕಿ.

(1) ನಮ್ಮ ಜ್ಞಾನಾಭಿವೃದ್ಧಿಗೆ ಶಬ್ದಕೋಶಗಳು ಹಾಗೂ ಜ್ಞಾನ ಕೋಶಗಳು

P

ಅವುಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು ಜೊತೆಗೆ

Q

ಉತ್ತಮ ಪರಿಕರಗಳಾಗಿವೆ. ಆದ್ದರಿಂದ ಪ್ರತಿಯೊಬ್ಬ ಜ್ಞಾನಾರ್ಥಿಯು ಅವುಗಳನ್ನು ಓದಬೇಕು

R

ದಿನಪತ್ರಿಕೆಗಳ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಸಂಗ್ರಹಿಸಬೇಕು. ಅವು ರಾಷ್ಟ್ರೀಯ ದಿನಪತ್ರಿಕೆಗಳಾದರೆ ಉತ್ತಮ. ಅದರೊಂದಿಗೆ ಸ್ಥಳೀಯ ದಿನಪತ್ರಿಕೆಗಳ ಮೂಲಕ ಸ್ಥಳೀಯ ಮಾಹಿತಿಗಳನ್ನು ಪಡೆಯುವಲ್ಲಿ ಹಿಂದೆ ಬೀಳಬಾರದು.

S

ಉತ್ತರ ಸಂಕೇತಗಳು

ಎ) QPRSಬಿ) RQPS

ಸಿ) RSPQಡಿ) PRQS

(2) ಸೊಪ್ಪು ತರಕಾರಿಗಳು ನಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಬೇಕಾದ

P

ಅವಶ್ಯ ನೈಸರ್ಗಿಕ ಪರಿಕರಗಳಾಗಿವೆ

Q

ಈ ನೈಸರ್ಗಿಕ ಖಜಾನೆಗೆ ಹಾನಿಯುಂಟಾಗುತ್ತಿದೆ. ಜೊತೆಗೆ ಮಾನವನ ಆರೋಗ್ಯಕ್ಕೂ ತೊಂದರೆಯುಂಟಾಗುತ್ತಿದೆ.

R

ಆದರೆ ರಾಸಾಯನಿಕ ಗೊಬ್ಬರಗಳನ್ನು ಹೊಲಗಳಿಗೆ ಯಥೇಚ್ಚವಾಗಿ ಹಾಕುವುದರಿಂದಾಗಿ.

S

ಉತ್ತರ ಸಂಕೇತಗಳು

ಎ) QPRSಬಿ) RQPSಸಿ) RSPQಡಿ) PRQS

ಉತ್ತರ:-(1)ಡಿ (2)ಬಿ

ಇಲ್ಲಿ ನೀಡಲಾದ ಪ್ರಶ್ನೆಗಳಲ್ಲಿರುವ ನಾಲ್ಕು ವಾಕ್ಯಗಳನ್ನು ಗಮನವಿಟ್ಟು ಓದಿ. ಅದಾದ ಬಳಿಕ ಆ ನಾಲ್ಕೂ ವಾಕ್ಯಗಳು ಒಟ್ಟಾರೆ ಏನನ್ನು ಹೇಳಲು ಹೊರಟಿವೆ ಎಂಬುದನ್ನು ಗ್ರಹಿಸಬೇಕು. ಬಳಿಕವೇ ಉತ್ತರ ಹುಡುಕಬೇಕು.

ಹಾಂ! ಉತ್ತರವನ್ನು ಪ್ರಶ್ನೆಯ ಕೆಳಗೆ ನೀಡಲಾದ ನಾಲ್ಕು ಉತ್ತರ ಸಂಕೇತಗಳಿಂದಲೇ ಸರಿಯಾಗಿರುವುದನ್ನು ಆರಿಸಬೇಕು. ಇಂಥಹ ಪ್ರಶ್ನೆಗಳನ್ನು ಬಿಡಿಸಲು ಯಾವುದೋ ಪುಸ್ತಕ ಸಹಾಯಕ್ಕೆ ಬರುವ ಸಾಧ್ಯತೆ ಕಡಿಮೆ, ಹೀಗಾಗಿ ಪುಸ್ತಕದ ಹುಳುವಾಗಿದ್ದರೆ ಕಷ್ಟ. ಇಂತಹ ಸಮಯದಲ್ಲಿ ಸಾಮಾನ್ಯಜ್ಞಾನವನ್ನು ಉಪಯೋಗಿಸಬೇಕು.

ಸೂಚನೆ:- ಈ ಕೆಳಗೆ ಕೊಡಲಾದ ಆರು ವಾಕ್ಯಗಳ ಭಾಗಗಳಲ್ಲಿ ಒಂದು ಮತ್ತು ಆರು ವಾಕ್ಯಗಳ ಭಾಗ ಸರಿಯಾಗಿವೆ. ನಡುವಿನ ನಾಲ್ಕು ವಾಕ್ಯಗಳು (PQRS) ಜಾಗ ಬದಲಾಯಿಸಿವೆ. ಅವುಗಳನ್ನು ಅರ್ಥಬರುವಂತೆ ಸರಿಯಾಗಿ ಹೊಂದಿಸಿ ಉತ್ತರ ಗುರುತಿಸಿ.

1. (1) ಒಂದು ಊರಿನಲ್ಲಿ ಒಬ್ಬ ದರ್ಜಿ ಇದ್ದ, ಆತ ಯಾವಾಗಲೂ

P - ಕಿಟಕಿಯ ಹತ್ತಿರ ಕೂತು ಬಟ್ಟೆ ಹೊಲಿಯುತ್ತಿದ್ದ

Q - ಒಂದು ದಿನ ಬೇಸತ್ತ ದರ್ಜಿ ಸೂಜಿಯಿಂದ ಸೊಂಡಿಲನ್ನು ಚುಚ್ಚಿದ

R - ಕೆರೆಗೆ ಹೋಗುತ್ತಿದ್ದ ಆನೆಯೊಂದು ಸೊಂಡಿಲಿನಿಂದ ಅವನನ್ನು ಆಶೀರ್ವದಿಸಿದಾಗ ಆತ ಪ್ರತಿಯಾಗಿ ಪ್ರೀತಿಯಿಂದ ಬಾಳೆಹಣ್ಣನ್ನು ತಿನ್ನಿಸುತ್ತಿದ್ದ.

S - ಆಗ ಮೌನದಿಂದ ಹೆಜ್ಜೆಯಿಟ್ಟ ಆನೆ, ಎರಡು ಕೊಡ ಕೆಸರು ನೀರನ್ನು ತಂದು ಅವನ ತಲೆಯ ಮೇಲೆ ಸುರಿದು ಬಿಟ್ಟಿತು

(6) ಪ್ರಾಣಿಗಳಿಗೂ ಆತ್ಮಾಭಿಮಾನ ಇರುವುದು ಸಹಜವಲ್ಲವೇ?

ಉತ್ತರ ಸಂಕೇತಗಳು:

ಎ) QSPRಬಿ) QRPSಸಿ) PRQSಡಿ) PQSR

2. (1) ಜಾನಪದ ಕತೆಯ ಒಂದು ಪ್ರಸಂಗ

P – ರೈತನೊಬ್ಬನಿಗೆ ದಿನವೂ ರಾಗಿ ಮುದ್ದೆ ತಿಂದು ಬೇಸರವಾಯಿತು

Q – ದಾರಿಯಲ್ಲಿ ಹೆಂಡತಿ ಕೊಟ್ಟ ರಾಗಿರೊಟ್ಟಿಯನ್ನು ತಿಂದು ಅತ್ತೆ ಮನೆ ಸೇರಿದ

R – ಒಳ್ಳೆಯ ರುಚಿರುಚಿಯ ಊಟದ ಆಸೆಯಿಂದ ಅತ್ತೆ ಮನೆಗೆ ಹೊರಟ

S – ಮನೆಯಿಂದ ಬಂದ ಅಳಿಯನಿಗೆ ಸಂಭ್ರಮದಿಂದ ರಾಗಿ ಸೇವಿಗೆ ಮಾಡಿ ಅತ್ತೆ ಬಡಿಸಿದಳು.

(6) ಜಾಣ ರೈತ ಹಾಡಿಕೊಂಡು ‘ಮನೆಯಲ್ಲಿದ್ರೆ ಲಿಂಗಾಕಾರ, ಪ್ರಯಾಣದಲ್ಲಿ ಚಕ್ರಾಕಾರ ಇಲ್ಲಿಗೂ ಬಂದ್ಯಾ ಜಡೆಶಂಕರ’ ಎಂದ ಪಡೆದಷ್ಟನ್ನು ಅನುಭವಿಸಲೇಬೇಕು ಅಲ್ಲವೇ?

ಉತ್ತರ ಸಂಕೇತಗಳು:

ಎ) RSQP ಬಿ) QPSR

ಸಿ) PRQS ಡಿ) RPQS

3. (1) ಒಂದು ಊರಿಗೆ ಒಂದು ನರಿ ಬಂತು

P – ದ್ರಾಕ್ಷಿ ಗೊಂಚಲಿನತ್ತ ಹಾರಿ ಹಾರಿ ದ್ರಾಕ್ಷಿಯನ್ನು ತೆಗೆಯಲು ಪ್ರಯತ್ನಿಸಿತು

Q- ದ್ರಾಕ್ಷಿ ತುಂಬಾ ಹುಳಿಯಾಗಿರುತ್ತದೆ ಎಂದು ಬಯ್ಯುತ್ತಾ ಬಂದ ಜಾಗಕ್ಕೆ ಹಿಂತಿರುಗಿತು

R - ಬೆಳೆದ ದ್ರಾಕ್ಷಿ ನೋಡಿ ತಿನ್ನಲು ಹವಣಿಸಿತು

S - ಆದರೆ ದ್ರಾಕ್ಷಿ ಗೊಂಚಲು ಅದರ ಕೈಗೆ ಸಿಗಲೇ ಇಲ್ಲ

(6) ಕೈಲಾಗದವರು ಹಾಗೆಯೇ ಹೇಳುತ್ತಾರೆ ಅಲ್ಲವೇ?

ಉತ್ತರ ಸಂಕೇತಗಳು:

ಎ) QSPRಬಿ) RPSQಸಿ) PRQSಡಿ) PQSR

ಉತ್ತರಗಳು:-1)ಸಿ 2)ಸಿ 3)ಬಿ

ಇಲ್ಲಿ(ಮೇಲಿನ ಪ್ರಶ್ನೆಗಳಲ್ಲಿ) ನಾವು ಗಮನಿಸಬೇಕಾದ ಅಂಶವೆಂದರೆ ಮೊದಲ ಹಾಗೂ ಆರನೇ ವಾಕ್ಯವನ್ನು ಗಮನವಿಟ್ಟು ಓದಿ ನೆನಪಿನಲ್ಲಿಟ್ಟುಕೊಂಡಿರಬೇಕು. ನಂತರ ಮಧ್ಯದಲ್ಲಿ ಉಳಿದ ನಾಲ್ಕು ವಾಕ್ಯಗಳನ್ನು ಪುನರ್ ಜೋಡಿಸಬೇಕು. ಹಾಗೆ ಜೋಡಿಸುವಾಗ ಅವು ಏನನ್ನು ಹೇಳಲು ಹೊರಟಿವೆ ಎಂಬುದನ್ನು ಗ್ರಹಿಸಿ ಕೆಳಗೆ ಕೊಟ್ಟಿರುವ ಉತ್ತರ ಸಂಕೇತಗಳಲ್ಲಿ ಯಾವುದು ಸರಿಯಾಗುತ್ತದೆ ಎಂಬುದನ್ನು ಗುರುತಿಸಿ ಉತ್ತರವನ್ನು ಟಿಕ್ ಹಾಕಬೇಕು. ಒಟ್ಟಾರೆ ಆರು ವಾಕ್ಯಗಳು ಒಂದು ಕಥೆಯನ್ನೊ, ನೀತಿ ಸಂದೇಶವನ್ನೊ, ಘಟಿತ ಘಟನೆಯ ಬಗ್ಗೆ ಮಾಹಿತಿಯನ್ನೋ ತಿಳಿಸಲು ಹೊರಟಿರುತ್ತವೆ. ಇಂತಹ ಪ್ರಶ್ನೆಗಳನ್ನು ಬಿಡಿಸಲು ಯಾವುದೋ ಪುಸ್ತಕದ ಸಹಾಯ ಸಾಧ್ಯವಾಗದು; ನಮ್ಮಲ್ಲಿರುವ ಸಾಮಾನ್ಯಜ್ಞಾನ ಹೆಚ್ಚು ಸಹಾಯಕ್ಕೆ ಬರುತ್ತವೆ.

(ಲೇಖಕರು: ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT