ಮುಂಬೈ: ರಿಲಯನ್ಸ್ ಫೌಂಡೇಷನ್ನ ವಾರ್ಷಿಕ ವಿದ್ಯಾರ್ಥಿ ವೇತನಕ್ಕಾಗಿ ಮತ್ತೊಮ್ಮೆ ಅರ್ಜಿಗಳು ಕರೆದಿದೆ.

2025-26ರ ಶೈಕ್ಷಣಿಕ ವರ್ಷಕ್ಕೆ ರಿಲಯನ್ಸ್ ಫೌಂಡೇಷನ್ 5100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಪ್ರಥಮ ವರ್ಷದ ಪೂರ್ಣಾವಧಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಭಾರತದಲ್ಲಿ ಉನ್ನತ ಶಿಕ್ಷಣಕ್ಕಾಗಿ ಈ ಅತಿದೊಡ್ಡ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 4, 2025 ಆಗಿದೆ.

ಪ್ರಮುಖಾಂಶಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 4, 2025

ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು

ಪದವಿ ವಿದ್ಯಾರ್ಥಿಗಳಿಗೆ ₹ 2 ಲಕ್ಷದವರೆಗೆ ಮತ್ತು ಸ್ನಾತಕೋತ್ತರ ಪದವೀಧರರಿಗೆ ₹ 6 ಲಕ್ಷದವರೆಗೆ ಅನುದಾನ

ಶೈಕ್ಷಣಿಕ ಅರ್ಹತೆ ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

2022ರಲ್ಲಿ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಧೀರೂಭಾಯಿ ಅಂಬಾನಿ ಅವರ 90ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ 10 ವರ್ಷಗಳಲ್ಲಿ 50,000 ವಿದ್ಯಾರ್ಥಿವೇತನ ನೀಡಿದ್ದರು.

ರಿಲಯನ್ಸ್ ಫೌಂಡೇಷನ್ ಪದವಿ ಮಟ್ಟದಲ್ಲಿ 5,000 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವೀಧರರಿಗೆ 100 ವಿದ್ಯಾರ್ಥಿವೇತನಗಳನ್ನು ಒದಗಿಸುತ್ತದೆ. ಪದವೀಧರರಿಗೆ ₹ 2 ಲಕ್ಷ ನೀಡಲಾಗುತ್ತದೆ.

ವಿದ್ಯಾರ್ಥಿವೇತನಕ್ಕಾಗಿ ವಿದ್ಯಾರ್ಥಿಗಳ ಆಯ್ಕೆಯು ಅವರ ಶೈಕ್ಷಣಿಕ ಅರ್ಹತೆ ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿರುತ್ತದೆ.

ಎಂಜಿನಿಯರಿಂಗ್, ತಂತ್ರಜ್ಞಾನ, ಇಂಧನ ಮತ್ತು ಜೀವ ವಿಜ್ಞಾನಗಳ ಆಯ್ದ ಕ್ಷೇತ್ರಗಳಲ್ಲಿ ಭಾರತದ ಅತ್ಯಂತ ಪ್ರತಿಭಾನ್ವಿತ 100 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವಿದ್ಯಾರ್ಥಿವೇತನ ನೀಡಲಾಗುವುದು. ಹಾಗೂ ರಾಷ್ಟ್ರೀಯ ಅಭಿವೃದ್ಧಿ ಮತ್ತು ಜಾಗತಿಕ ಪ್ರಗತಿಗೆ ನಿರ್ಣಾಯಕ ಕ್ಷೇತ್ರಗಳಲ್ಲಿ ಮುಂದುವರಿದ ಅಧ್ಯಯನ ಮತ್ತು ಸಂಶೋಧನೆಗಾಗಿ ವಿದ್ಯಾರ್ಥಿಗಳು ₹ 6 ಲಕ್ಷ ಪಡೆಯುತ್ತಾರೆ.

ಸಾಮಾಜಿಕವಾಗಿ, ಪರಿಸರ ದೃಷ್ಟಿಯಿಂದ ಮತ್ತು ಡಿಜಿಟಲ್ ವಿಚಾರದ ಆಲೋಚನೆ ಇರುವವರು ಹಾಗೂ ಭಾರತಕ್ಕಾಗಿ ದೊಡ್ಡದಾಗಿ ಯೋಚಿಸಬಲ್ಲ ಭವಿಷ್ಯದ ನಾಯಕರ ಗುಂಪನ್ನು ಬೆಳೆಸುವುದು ವಿದ್ಯಾರ್ಥಿವೇತನದ ಗುರಿಯಾಗಿದೆ.

ರಿಲಯನ್ಸ್ 29 ವರ್ಷಗಳಿಗೂ ಹೆಚ್ಚು ಕಾಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ರಿಲಯನ್ಸ್ ಇಲ್ಲಿಯವರೆಗೆ ವಿವಿಧ ಮಾರ್ಗಗಳ ಮೂಲಕ 28,000ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ನೀಡಿದೆ. ಫೌಂಡೇಷನ್ ಪ್ರಕಾರ, ವಿದ್ಯಾರ್ಥಿವೇತನ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಇಂದು ವೃತ್ತಿಪರ ಜೀವನದಲ್ಲಿ ಉತ್ತಮ ಹೆಸರುಗಳಿಸುತ್ತಿದ್ದಾರೆ ಮತ್ತು ಭಾರತದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ.

ವಿದ್ಯಾರ್ಥಿವೇತನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು scholarships.reliancefoundation.org ಗೆ ಭೇಟಿ ನೀಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.