ನನ್ನ ಒಬ್ಬನೇ ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಒಂದು ತಿಂಗಳಿಂದ, ನಿದ್ರೆಯಲ್ಲಿ ಇದ್ದಾಗ ಬೆಚ್ಚಿಬೀಳುತ್ತಾನೆ. ತೀರಾ ಅನ್ಯಮನಸ್ಕನಾಗಿರುತ್ತಾನೆ. ಏನಾಯಿತು ಎಂದು ಕೇಳಿದರೆ ಹೇಳುತ್ತಿಲ್ಲ. ಏನು ಮಾಡಬೇಕೋ ತೋಚುತ್ತಿಲ್ಲ. ಸಿಂಗಲ್ ಮದರ್ ಆಗಿರುವ ಕಾರಣದಿಂದ ಕುಟುಂಬದಿಂದಲೂ ಸಹಕಾರ ಅಷ್ಟಕ್ಕಷ್ಟೆ. ಪರಿಹಾರ ತಿಳಿಸುವಿರಾ?