ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಪರಿಚಯ: ವಾರ್ಧಾ (ಮಹಾರಾಷ್ಟ್ರ)

Published 17 ಏಪ್ರಿಲ್ 2024, 21:27 IST
Last Updated 17 ಏಪ್ರಿಲ್ 2024, 21:27 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿ ಅವರು ಸ್ಥಾಪಿಸಿರುವ ‘ಸೇವಾ ಗ್ರಾಮ’ ಆಶ್ರಮವಿರುವ ಮಹಾರಾಷ್ಟ್ರದ ವಾರ್ಧಾ ಲೋಕಸಭಾ ಕ್ಷೇತ್ರವು ತೀವ್ರ ಪೈಪೋಟಿಗೆ ಸಜ್ಜಾಗಿದೆ. ಎರಡು ಬಾರಿ ಇಲ್ಲಿಂದ ಜಯಭೇರಿ ಬಾರಿಸಿರುವ ರಾಮದಾಸ್‌ ತಡಸ್‌ ಅವರನ್ನೇ ಮೂರನೇ ಬಾರಿಯೂ ಬಿಜೆಪಿಯು ಅಖಾಡಕ್ಕಿಳಿಸಿದೆ. ಇವರಿಗೆ ಪೈಪೋಟಿ ನೀಡಲು ಎನ್‌ಸಿಪಿ ಶರದ್ ಪವಾರ್‌ ಬಣವು ಅಮರ್‌ ಕಾಳೆ ಅವರನ್ನು ಸ್ಪರ್ಧೆಗಿಳಿಸಿದೆ. ಪ್ರಕಾಶ್‌ ಅಂಬೇಡ್ಕರ್‌ ಅವರ ವಂಚಿತ್‌ ಬಹುಜನ ಅಘಾಡಿ (ವಿಬಿಎ) ಕೂಡ ರಾಜೇಂದ್ರ ಸಾಳುಂಖೆ ಅವರನ್ನು ಕಣಕ್ಕಿಳಿಸಿದೆ. ಬಿಎಸ್‌ಪಿಯು ಮೋಹನ್‌ ರಾಯಕ್‌ವಾರ್ ಅವರನ್ನು ಸ್ಪರ್ಧಿಯಾಗಿಸಿದೆ. ರಾಮದಾಸ್‌ ಅವರು 2019ರ ಚುನಾವಣೆಯಲ್ಲಿ 1,87,191 ಮತಗಳ ಅಂತರದಿಂದ ಕಾಂಗ್ರೆಸ್‌ನ ಚಾರುಲತಾ ಟೋಕಸ್ ಅವರನ್ನು ಪರಾಭವಗೊಳಿಸಿದ್ದರು. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವು ಕಳೆದೆರಡು ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದಾಗಿ ಕಮಲ ಪಕ್ಷದ ಪಾಲಾಗಿತ್ತು. ಕಾಂಗ್ರೆಸ್‌ ಇದೇ ಮೊದಲ ಬಾರಿ ಈ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಎನ್‌ಸಿಪಿ ಶರದ್‌ ಪವಾರ್‌ ಬಣವು ‘ಇಂಡಿಯಾ’ ಒಕ್ಕೂಟದ ಜೊತೆಗಿರುವುದರಿಂದ ಈ ಬಾರಿ ಕಾಂಗ್ರೆಸ್‌ ಪರವಾಗಿರುವ ಮತಗಳು ಎನ್‌ಸಿಪಿ ಅಭ್ಯರ್ಥಿಗೆ ಲಭಿಸುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ವಿಬಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗುವ ಸಾಧ್ಯತೆ ಇದ್ದು, ಇದರಿಂದ ಬಿಜೆಪಿ ಅಭ್ಯರ್ಥಿಗೆ ಲಾಭವಾಗಲಿದೆ. ಬಿಎಸ್‌ಪಿ ಅಭ್ಯರ್ಥಿ ಕೂಡ ಕಣದಲ್ಲಿರುವುದರಿಂದ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT