ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

114 ವಿಧಾನಸಭಾ ಕ್ಷೇತ್ರಗಳಿಗೆ ‘ಕೈ’ಅಭ್ಯರ್ಥಿಗಳ ಪ್ರಕಟ: ಕಡಪದಿಂದ ಶರ್ಮಿಳಾ ಕಣಕ್ಕೆ

Published 2 ಏಪ್ರಿಲ್ 2024, 10:48 IST
Last Updated 2 ಏಪ್ರಿಲ್ 2024, 10:48 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಪಕ್ಷವು ನಾಲ್ಕು ರಾಜ್ಯಗಳ 17 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಆಂಧ್ರ ಪ್ರದೇಶ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಅವರನ್ನು ಕಡಪ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ನವದೆಹಲಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಒಡಿಶಾದ 8, ಆಂಧ್ರ ಪ್ರದೇಶದ 5, ಬಿಹಾರದ 3 ಕ್ಷೇತ್ರಗಳು ಹಾಗೂ ಪಶ್ಚಿಮ ಬಂಗಾಳದ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಯಿತು.

ಶರ್ಮಿಳಾ ಅವರು ಸೋದರ ಸಂಬಂಧಿಯೂ ಆಗಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಹಾಲಿ ಸಂಸದ ವೈ.ಎಸ್‌.ಅವಿನಾಶ್‌ ರೆಡ್ಡಿ ಅವರನ್ನು ಎದುರಿಸಲಿದ್ದಾರೆ.  

ಕೇಂದ್ರದ ಮಾಜಿ ಸಚಿವ ಎಂ.ಎಂ.ಪಲ್ಲಂ ರಾಜು (ಕಾಕಿನಾಡ ಕ್ಷೇತ್ರ), ಗಿಡುಗು ರುದ್ರ ರಾಜು (ರಾಜಮಂಡ್ರಿ) ಮತ್ತು ಪಿ.ಜಿ.ರಾಮ್‌ಪುಲ್ಲಯ್ಯ ಯಾದವ್ (ಕರ್ನೂಲ್) ಅವರಿಗೆ ಪಕ್ಷವು ಟಿಕೆಟ್‌ ನೀಡಿದೆ. ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೆ 114 ಅಭ್ಯರ್ಥಿಗಳ ಪಟ್ಟಿಯನ್ನೂ ಕಾಂಗ್ರೆಸ್‌ ಪ್ರಕಟಿಸಿದೆ. 

ಬಿಹಾರದ ಕಿಶನ್‌ಗಂಜ್‌ ಮತ್ತು ಕಟಿಹಾರ್ ಕ್ಷೇತ್ರಗಳಿಗೆ ಕ್ರಮವಾಗಿ ಮೊಹಮ್ಮದ್‌ ಜಾವೇದ್ ಹಾಗೂ ತಾರಿಖ್ ಅನ್ವರ್‌ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಶಾಸಕ ಅಜೀತ್‌ ಶರ್ಮಾ ಅವರನ್ನು ಭಾಗಲ್ಪುರ ಕ್ಷೇತ್ರದಿಂದ ಅಖಾಡಕ್ಕಿಳಿಸಿದೆ.

ಇದರೊಂದಿಗೆ ಪಕ್ಷವು ಒಟ್ಟು 228 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ. ಉತ್ತರ ಪ್ರದೇಶದ ಅಮೇಠಿ ಮತ್ತು ರಾಯಬರೇಲಿ ಕ್ಷೇತ್ರಗಳಲ್ಲಿ ಪಕ್ಷವು ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT