ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Exit poll 2024: ಕೇರಳದಲ್ಲಿ ಖಾತೆ ತೆರೆಯಲಿದೆ ಬಿಜೆಪಿ ಎನ್ನುತ್ತಿವೆ ಸಮೀಕ್ಷೆ

Published 1 ಜೂನ್ 2024, 14:51 IST
Last Updated 1 ಜೂನ್ 2024, 14:51 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಏಳೂ ಹಂತಗಳ ಮತದಾನ ಪೂರ್ಣಗೊಂಡ ಬೆನ್ನಲ್ಲೇ ಪ್ರಕಟಗೊಂಡ ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಕೇರಳದಲ್ಲಿ ಈ ಬಾರಿ ಬಿಜೆಪಿ ತನ್ನ ಖಾತೆ ತೆರಲಿದೆ ಎಂದಿವೆ.

ಸಮೀಕ್ಷೆಗಳ ಪ್ರಕಾರ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ದಕ್ಷಿಣ ಭಾರತದಲ್ಲೂ ನಿಧಾನವಾಗಿ ತನ್ನ ಅಸ್ತಿತತ್ವ ಗಟ್ಟಿಗೊಳಿಸುತ್ತಿದೆ ಎಂದಿವೆ. ಹೀಗಾಗಿ ದಕ್ಷಿಣವನ್ನೇ ನೆಚ್ಚಿಕೊಂಡಿದ್ದ ಇಂಡಿಯಾ ಒಕ್ಕೂಟಕ್ಕೆ ಇದು ಭ್ರಮನಿರಸನ ಉಂಟು ಮಾಡಿದೆ.

ತಮಿಳುನಾಡಿನಲ್ಲಿ ಒಟ್ಟು 39 ಸ್ಥಾನಗಳಿವೆ. ಇದರಲ್ಲಿ ಆಡಳಿತಾರೂಢ ಡಿಎಂಕೆ ಈ ಬಾರಿ 20–22 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್‌ 6 ರಿಂದ 8, ಎಐಎಡಿಎಂಕೆ–12 ಹಾಗೂ ಬಿಜೆಪಿ 1ರಿಂದ 3 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಕೇರಳದಲ್ಲಿ ಕಾಂಗ್ರೆಸ್‌ 13ರಿಂದ 14 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದರೆ, ಬಿಜೆಪಿ 2ರಿಂದ 3 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕೇರಳದಲ್ಲಿ ನೆಲೆ ಹುಡುಕಿಕೊಳ್ಳಲಿದೆ. ಆಡಳಿತಾರೂಢ ಯುಡಿಎಫ್‌ 4 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಇಲ್ಲಿ ಒಟ್ಟು 20 ಕ್ಷೇತ್ರಗಳಿವೆ.

ಕೇರಳದ ಸಮೀಕ್ಷೆಯ ವರದಿ ಹೀಗಿದೆ...

ಸಿ–ವೋಟರ್ಸ್‌: ಯುಡಿಎಫ್‌: 17–19; ಎಲ್‌ಡಿಎಫ್‌–0;ಎನ್‌ಡಿಎ: 1–3

ಡಿ–ಡೈನಾಮಿಕ್ಸ್‌: ಯುಡಿಎಫ್‌: 0–14; ಎಲ್‌ಡಿಎಫ್‌: 0–4;ಎನ್‌ಡಿಎ: 0–2

ಆ್ಯಕ್ಸಿಸ್‌ ಮೈ ಇಂಡಿಯಾ: ಯುಡಿಎಫ್‌: 17–18; ಎಲ್‌ಡಿಎಫ್‌: 0–1;ಎನ್‌ಡಿಎ: 2–3

ಸಿಎನ್‌ಎಕ್ಸ್‌: ಯುಡಿಎಫ್‌: 13–15; ಎಲ್‌ಡಿಎಫ್‌: 3–5;ಎನ್‌ಡಿಎ: 1–3

ಜನ್‌ ಕಿ ಬಾತ್‌: ಯುಡಿಎಫ್‌: 14–17; ಎಲ್‌ಡಿಎಫ್‌: 3–5; ಎನ್‌ಡಿಎ: 0–1

ಆಂಧ್ರದಲ್ಲೂ ಎನ್‌ಡಿಎ ಸದ್ದು

ನೆರೆಯ ಆಂಧ್ರ ಪ್ರದೇಶದಲ್ಲಿ ಎನ್‌ಡಿಎ ಹೆಚ್ಚಿನ ಸ್ಥಾನ ಗೆಲ್ಲಲಿದೆ. ವೈಎಸ್‌ಆರ್‌ಪಿ 2ನೇ ಸ್ಥಾನದಲ್ಲಿದೆ. ಆದರೆ ಈ ರಾಜ್ಯದಲ್ಲಿ ಇಂಡಿಯಾ ಒಕ್ಕೂಟ ಯಾವುದೇ ಸ್ಥಾನವನ್ನು ಗೆಲ್ಲದು ಎಂದು ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಹೇಳಿವೆ.

ಕೇರಳದ ಸಮೀಕ್ಷೆಯ ವರದಿ ಹೀಗಿದೆ...

ಸಿ–ವೋಟರ್ಸ್‌: ವೈಎಸ್‌ಆರ್‌ಸಿಪಿ: 0–4; ಎನ್‌ಡಿಎ: 21–25; 0

ಡಿ–ಡೈನಾಮಿಕ್ಸ್‌: ವೈಎಸ್‌ಆರ್‌ಸಿಪಿ: 0–7; ಎನ್‌ಡಿಎ: 18; 0

ಸಿಎನ್‌ಎಕ್ಸ್‌: ವೈಎಸ್‌ಆರ್‌ಸಿಪಿ: 3–5; ಎನ್‌ಡಿಎ: 19–23; 0

ಜನ್‌ ಕಿ ಭಾತ್: ವೈಎಸ್‌ಆರ್‌ಸಿಪಿ: 18–13; ಎನ್‌ಡಿಎ: 10–14; 0

ಪೀಪಲ್ಸ್ ಪಲ್ಸ್‌: ವೈಎಸ್‌ಆರ್‌ಸಿಪಿ: 3–5; ಎನ್‌ಡಿಎ: 17–21; 0

ತೆಲಂಗಾಣದಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟ ಸಮಬಲ

ನೆರೆಯ ತೆಲಂಗಾಣದಲ್ಲಿ ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟ ಸಮಬಲ ಫಲಿತಾಂಶ ಕಾಣಲಿವೆ ಎಂದು ಸಮೀಕ್ಷೆಗಳು ಹೇಳಿವೆ.

ತೆಲಂಗಾಣದಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಬಣಗಳು 7ರಿಂದ 9 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಅಸಾದುದ್ದೀನ್ ಓವೈಸಿಯ ಎಐಎಂಐಎಂ ಪಕ್ಷವು ಒಂದು ಕ್ಷೇತ್ರದಲ್ಲಿ ಗೆಲುವ ದಾಖಲಿಸಲಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT