ಹಾಸನ: ‘ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯ ಚಿಹ್ನೆ ಯಾವುದಿರುತ್ತೆ? ತೆನೆ ಹೊತ್ತ ಮಹಿಳೆಯದ್ದೇ ಅಥವಾ ಕಮಲವೇ ಎಂದು ಕೆಲವರು ಕೇಳಿದ್ದರು. ಯಾರಿಗೂ ಅನುಮಾನ, ಗೊಂದಲ ಬೇಡ. ಅಲ್ಲಿ ತೆನೆ ಹೊತ್ತ ಮಹಿಳೆ ಚಿಹ್ನೆಯೇ ಇರುತ್ತದೆ. ಆ ಮಹಿಳೆ ಹೆಸರು ಕಮಲ’ ಎಂದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.