ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆ‍ಪಿಯನ್ನು ದೇಶದಿಂದಲೇ ತೆಗೆದುಹಾಕುವ ಯೋಜನೆ ನಮ್ಮದು: ಜಿ. ಪರಮೇಶ್ವರ

Published 14 ಏಪ್ರಿಲ್ 2024, 6:59 IST
Last Updated 14 ಏಪ್ರಿಲ್ 2024, 6:59 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆ‍ಪಿಯನ್ನು ದೇಶದಿಂದಲೇ ತೆಗೆದುಹಾಕುವ ಯೋಜನೆ ನಮ್ಮದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.

ಬಿಜೆಪಿಯ ‘ದಕ್ಷಿಣ ಭಾರತದಲ್ಲಿ ಮಿಷನ್ 50’ ಗುರಿಯ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ಕಾದು ನೋಡೋಣ. ನಾವು ಬಿಜೆಪಿಯನ್ನೇ ತೆಗೆದುಹಾಕುವ ಗುರಿ ಇಟ್ಟುಕೊಂಡಿದ್ದೇವೆ. ದಕ್ಷಿಣ ಭಾರತದಿಂದ ನಮ್ಮನ್ನು (ಕಾಂಗ್ರೆಸ್‌) ತೆಗೆದುಹಾಕಲು ಅವರಿಗೆ (ಬಿಜೆಪಿ) ಮಿಷನ್ 50 ಯೋಜನೆ ಇರಬಹುದು. ಆದರೆ ನಾವು ಇಡೀ ದೇಶದಿಂದಲೇ ಬಿಜೆಪಿಯನ್ನು ತೆಗೆದುಹಾಕುವ ಗುರಿ ಹಾಕಿಕೊಂಡಿದ್ದೇವೆ’ ಎಂದರು.

ಬಿಜೆಪಿಯ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾವು ನಿಮಗೆ ಸಂವಿಧಾನದ ಭರವಸೆ ನೀಡುತ್ತೇವೆ ಎಂದು ಅವರು ಹೇಳಬೇಕಾಗಿತ್ತು. ಆದರೆ ಅವರು ಅದನ್ನು ಹೇಳಿಲ್ಲ. ಬಿಜೆಪಿಯ ಆಡಳಿತದ ಬಗ್ಗೆ ನಮಗೆ ಇನ್ನೂ ಆತಂಕವಿದೆ. ಬಡತನ ವಿಮೋಚನೆಗಾಗಿ ಬಿಜೆಪಿ ಒಂದು ಕಾರ್ಯಕ್ರಮವನ್ನು ನೀಡಿದೆಯೇ? ಇದು ದುರದೃಷ್ಟಕರ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT