ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Election FAQ | ನೋಟಾ ಎಂದರೇನು? ಅದಕ್ಕಿರುವ ಪ್ರಾಮುಖ್ಯತೆ ಏನು?

ಚುನಾವಣಾ ಪ್ರಕ್ರಿಯೆ ಮೇಲೆ ನೋಟಾ ಪರಿಣಾಮ ಬೀರಲಿದೆಯೇ?
Last Updated 20 ಏಪ್ರಿಲ್ 2023, 10:01 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರಿದೆ. ವಿವಿಧ ಪಕ್ಷಗಳು ಮತದಾರರನ್ನು ಸೆಳೆಯುವ ಕಸರತ್ತು ಮಾಡುತ್ತಿದೆ. ಭಾರೀ ಘೋಷಣೆಗಳ ಮೂಲಕ ಅಧಿಕಾರದ ಗದ್ದುಗೆಗೆ ಏರಲು ಸರ್ವ ಪ್ರಯತ್ನಗಳೂ ನಡೆಯುತ್ತಿದೆ. ಪಕ್ಷಗಳ, ಅಭ್ಯರ್ಥಿಗಳ ಆಶ್ವಾಸನೆಯಿಂದ ಸಮಾಧಾನ ಇಲ್ಲದವರು ನೋಟಾಗೆ (NOTA - None Of The Above) ಮತ ಚಲಾಯಿಸಬಹುದು.

ಹಾಗಾದರೆ ನೋಟಾ ಎಂದರೇನು?

None Of The Above ಎನ್ನುವುದರ ಸಂಕ್ಷಿಪ್ತ ರೂಪವೇ ನೋಟಾ. ಈ ಮೇಲಿನ ಯಾರೂ ಅಲ್ಲ ಎನ್ನುವುದು ಇದರ ಅರ್ಥ. ಚುನಾವಣಾ ಅಖಾಡಲ್ಲಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಒಲ್ಲದವರು ನೋಟಾ ಆಯ್ಕೆ ಮಾಡಿಕೊಳ್ಳಬಹುದು. ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳ ಹೆಸರಿನ ಬಳಿಕ ಕೊನೆ ಸಾಲಿನಲ್ಲಿ ನೋಟಾ ಆಯ್ಕೆ ಇರಲಿದೆ.

ಯಾವ ಅಭ್ಯರ್ಥಿಯ ಬಗ್ಗೆ ಒಲವು ಇರದ ಮತದಾರರು ನೋಟಾ ಗುಂಡಿ ಒತ್ತಬಹುದು. ಇವಿಎಂನಲ್ಲಿ ಇರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಲು ಮತದಾರರಿಗೆ ನೀಡುವ ಅವಕಾಶವೇ ನೋಟಾ.

ನೋಟಾ ಜಾರಿಗೆ ಬಂದಿದ್ದು ಯಾವಾಗ?

2013ರಲ್ಲಿ ಛತ್ತೀಸ್‌ಗಢ, ಮಿಜೋರಾಂ, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಪಂಚರಾಜ್ಯ ಚುನಾವಣೆಯಲ್ಲಿ ಈ ಆಯ್ಕೆಯನ್ನು ಚುನಾವಣಾ ಆಯೋಗ ಪರಿಚಯಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲೂ ನೋಟಾ ಆಯ್ಕೆ ಇತ್ತು.

ಈ ಥರದ ಆಯ್ಕೆಯನ್ನು ನೀಡಬೇಕು ಎನ್ನುವ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಚುನಾವಣಾ ಆಯೋಗ ನೋಟಾವನ್ನು ಪರಿಚಯಿಸಿತ್ತು.

ಚುನಾವಣಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆಯೇ?

ನೋಟಾ ಆಯ್ಕೆಯು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ನೋಟಾಗೆ ಹೆಚ್ಚು ಮತ ಬಿದ್ದರೂ, ಅತೀ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ಹಾಗಾದರೆ ನೋಟಾದ ಉದ್ದೇಶವೇನು?

ನೋಟಾಗೆ ಪ್ರಾಶಸ್ತ್ಯ ಇಲ್ಲದೆ ಹೋದರೂ, ಕಣದಲ್ಲಿರುವ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಮತದಾರರಿಗೆ ಇರುವ ಸಾಧನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT