ಗುರುವಾರ , ಮಾರ್ಚ್ 30, 2023
21 °C

ಕ್ರಿಸ್ಟಿನ್ ಸ್ಟಿವರ್ಟ್– ಮೊದಲು‌ ನಟನ ಜೊತೆ ಡೇಟಿಂಗ್, ಇದೀಗ ನಟಿ ಜೊತೆ ಮದುವೆ!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು; ಖ್ಯಾತ ಹಾಲಿವುಡ್ ನಟಿ ಹಾಗೂ ಉಭಯಲಿಂಗಿ ಕ್ರಿಸ್ಟಿನ್ ಸ್ಟಿವರ್ಟ್ ಅವರು ಇನ್ನೊಬ್ಬ ನಟಿಯನ್ನು ಮದುವೆಯಾಗವುದಾಗಿ ಘೋಷಿಸಿದ್ದಾರೆ.

ನಟಿ ಹಾಗೂ ಲೇಖಕಿ ಡೆಲಾನ್ ಮೇಯರ್ ಅವರ ಜೊತೆ ಕ್ರಿಸ್ಟಿನ್ ಸ್ಟಿವರ್ಟ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಇಬ್ಬರೂ ಕಳೆದ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

‘ಶೀಘ್ರದಲ್ಲೇ ನಾನು ಹಾಗೂ ಡೆಲಾನ್ ಮೇಯರ್ ಮದುವೆಯಾಗುತ್ತೇವೆ’ ಎಂದು ಕ್ರಿಸ್ಟಿನ್ ಘೋಷಿಸಿದ್ದಾರೆ. ಅವರು ತಾವು ಉಭಯಲಿಂಗಿ ಎಂದು ಘೋಷಿಸಿಕೊಂಡಿದ್ದರು.

‘ನಾವು ಮದುವೆಯಾಗುತ್ತಿದ್ದೇವೆ. ನಾವು ಅಂದುಕೊಂಡಂತೆ ಸಂಪೂರ್ಣವಾಗಿ ನಡೆಯಲಿದೆ‌. ನನ್ನ ಬಯಕೆಯಂತೆ ನಾನು ನನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅವಳು ಒಪ್ಪಿದ್ದಾಳೆ. ನಾವು ಮದುವೆಯಾಗಲಿದ್ದೇವೆ. ಇದು ನಡೆಯಲಿದೆ‘ ಎಂದು ಖಾಸಗಿ ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಕ್ರಿಸ್ಟಿನ್ ಸ್ವಿವರ್ಟ್ ಹೇಳಿದ್ದಾರೆ.

ಕ್ರಿಸ್ಟಿನ್ ಸ್ವಿವರ್ಟ್ ಈ ಹಿಂದೆ ‘ಟ್ವಿಲೈಟ್‌’ ಖ್ಯಾತಿಯ ಹಾಲಿವುಡ್ ನಟ ರಾಬರ್ಟ್ ಪ್ಯಾಟಿಸನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇದೀಗ ಮಹಿಳೆಯನ್ನು ಮದುವೆಯಾಗುತ್ತಿದ್ದಾರೆ.

ಕ್ರಿಸ್ಟಿನ್ ಸ್ವಿವರ್ಟ್ ‘ಟ್ವಿಲೈಟ್‌’ ಸೇರಿದಂತೆ ಅನೇಕ ಜನಪ್ರಿಯ ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಡಯಾನಾ ಪಾತ್ರದಲಿ ಅವರು ಅಭಿನಯಿಸಿರುವ ‘ಸ್ಪೆನ್ಸರ್’ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಇನ್ನು ಡೆಲಾನ್ ಮೇಯರ್ ‘ಮೋಕ್ಸಿ’, ‘ರಾಕ್ ಬಾಟಮ್’ ಹಾಗೂ ‘ಮಿಸ್ 2059’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ವಿಡಿಯೊ ನೋಡಿ: ಬುರ್ಜ್ ಖಲೀಫಾ ಮೇಲಿಂದ ಶಾರುಕ್ ಖಾನ್‌ಗೆ ಜನ್ಮದಿನದ ವಿಶೇಷ ಶುಭಾಶಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು