ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿತ್‌ ಅಭಿನಯದ ’ವಲಿಮೈ’ ಚಿತ್ರ ಫೆಬ್ರುವರಿ 24ಕ್ಕೆ ಬಿಡುಗಡೆ

Last Updated 15 ಫೆಬ್ರುವರಿ 2022, 6:24 IST
ಅಕ್ಷರ ಗಾತ್ರ

ತಮಿಳು ನಟ ಅಜಿತ್‌ ಕುಮಾರ್ ಅಭಿನಯದ ’ವಲಿಮೈ’ ಚಿತ್ರ ಫೆಬ್ರುವರಿ 24ರಂದು ತೆರೆಗೆ ಬರಲಿದೆ.

ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಅಜಿತ್‌ ನಟಿಸಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇತ್ತೀಚೆಗೆ ಚಿತ್ರತಂಡ ವಲಿಮೈ ಸಿನಿಮಾದ ಕಿರು ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಅಜಿತ್​ ಮಾಡಿರುವ ಬೈಕ್​ ಸ್ಟಂಟ್ಸ್ ಮೈ ನವಿರೇಳಿಸುವಂತಿದೆ. ಅವರು ಕೆಲವು ಬೈಕ್ ಸ್ಟಂಟ್​ಗಳನ್ನು ಡೂಪ್​ ಬಳಸದೇ ಮಾಡಿರುವುದು ವಿಶೇಷ.

ಈ ವಿಡಿಯೊ ಕೇವಲ ಒಂದೇ ಗಂಟೆಯಲ್ಲಿ 30 ಸಾವಿರ ಲೈಕ್ಸ್​ ಪಡೆದಿದ್ದು, ಲಕ್ಷಾಂತರ ಸಲ ವೀಕ್ಷಣೆ ಕಂಡಿರುವುದು ದಾಖಲೆಯಾಗಿದೆ. ಇದಕ್ಕೆ ಅಜಿತ್‌ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ.

ಝೀ ಸ್ಟುಡಿಯೋಸ್ ಮತ್ತು ಬೋನಿ ಕಪೂರ್ ಅವರು ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಎಚ್. ವಿನೋತ್‌ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವಲಿಮೈನಲ್ಲಿ ನಾಯಕಿಯಾಗಿ ಹುಮಾ ಖುರೇಶಿ ನಟಿಸಿದ್ದಾರೆ. ತೆಲುಗು ನಟ ಕಾರ್ತಿಕೇಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೋಗಿ ಬಾಬು, ಸುಮಿತ್ರಾ ಸೇರಿದಂತೆ ಹಲವರು ತಾರಾಬಳಗದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT